ಪೋತಗಲ್ : ಭಾರದ ಕಲ್ಲೆಳೆಯುವ ಎತ್ತುಗಳ ಸ್ಪರ್ಧೆ

ರಾಯಚೂರು.ಜ.14- ನಗರದ ವಾರ್ಡ್ ನಂ.35 ಪೋತಗಲ್ ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ಅಯ್ಯಾಳಪ್ಪ ತಾತಾನ ಹಬ್ಬದ ಪ್ರಯುಕ್ತ ಇಂದು ಭಾರದ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆ ನಡೆಸಲಾಯಿತು.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಈ ಪಂದ್ಯವನ್ನು ಉದ್ಘಾಟಿಸಿದರು. ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 10 ಸಾವಿರ, ದ್ವಿತೀಯ ಬಹುಮಾನ 5 ಸಾವಿರ, ತೃತೀಯ ಬಹುಮಾನ 3 ಸಾವಿರ ರೂ. ನೀಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸಣ್ಣ ನರಲಿಂಹ ರೆಡ್ಡಿ, ಬಿಜೆಪಿ ಮುಖಂಡರು ಹಾಗೂ ನಗರಸಭೆ ಮಾಜಿ ಸದಸ್ಯರಾದ ದೊಡ್ಡ ಮಲ್ಲೇಶಪ್ಪ, ಶಂಶಾಲಪ್ಪ, ಮಲ್ಲಾರೆಡ್ಡಿ, ವೆಂಕಟೇಶ ದೊಡ್ಡಿ ಅಯ್ಯಾಳಪ್ಪ, ನಾಗೇಶ ಪವಾರ್, ಎನ್.ಹೆಚ್.ಮಲ್ಲೇಶ, ಮಹಾದೇವ, ಹುಸೇನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment