ಪೋಟೋಶೊಟ್‌ನಲ್ಲಿ ಪಾರು

 

ಕನ್ನಡ ಕಿರುತೆರೆಯಲ್ಲಿ ಜೀ ವಾಹಿನಿ ಸಾಕಷ್ಟು ಸದ್ದು ಮಾಡುತ್ತಿದೆ. ರಿಯಾಲಿಟಿ ಶೋಗಳಂತೂ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿ ಬರುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಈಗ ರಿಯಾಲಿಟಿ ಷೋಗಳ ಜತೆಗೆ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಹೆಂಗಳೆಯರ ಮನಗೆಲ್ಲುವತ್ತ ದಾಪುಗಾಲು ಹಾಕಿದೆ.ಅದರಲ್ಲೂ ಪಾರು ಧಾರಾವಾಹಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ.
ವಿಶಿಷ್ಟ ಕಥಾಹಂದರವಿರುವ ಧಾರಾವಾಹಿಗಳನ್ನು ನಿರ್ಮಿಸಿ ಕನ್ನಡಿಗರಿಗೆ ಸದಾ ಮನರಂಜನೆಯನ್ನು ಉಣಬಡಿಸುತ್ತಿದೆ ಜೀ ವಾಹಿನಿ. ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಹೊಸ ಮಾದರಿಯ ಕಥೆಗಳನ್ನು ಹೊಂದಿರುವ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವುದು ವಿಶೇಷ. ಈ ಪೈಕಿ ಪಾರು ಧಾರಾವಾಹಿಯೂ ಒಂದು.
ಅರಸನ ಕೋಟೆಯ ಚಾಮುಂಡೇಶ್ವರಿಯ ದಿಟ್ಟ ಮಾತುಗಳು, ಮುದ್ದಿನ ಹುಡುಗಿ ಪಾರುಳ ಮುಗ್ದತೆ, ಆದಿತ್ಯನ ಶಿಸ್ತು, ಪ್ರೀತಮ್ ಮಾಡುವ ತರಲೆ ಪ್ರೇಕ್ಷಕರ ಹೃದಯಾಳದಲ್ಲಿ ಬೇರೂರಿವೆ. ಪಕ್ಕಾ ಸಿನಿಮಾ ಶೈಲಿಯ ಮೇಕಿಂಗ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ಬೃಹದಾಕಾರದ ಮನೆಗಳು, ಅಖಿಂಡಾಲೇಶ್ವರಿಯಿಂದ ಹಿಡಿದು ಈ ಧಾರಾವಾಹಿಯಲ್ಲಿ ನಟಿಸಿರುವ ಎಲ್ಲ ಪಾತ್ರಧಾರಿಗಳು ಧರಿಸಿರುವ ಕಣ್ಣು ಕೋರೈಸುವ ಸೀರೆ, ಒಡವೆಗಳು, ಪಾರುವಿನ ಸರಳತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಇವೆಲ್ಲದರಿಂದಾಗಿ ವಿಭಿನ್ನ ರೀತಿಯ ಕಥೆಯಾಧಾರಿತ ಧಾರಾವಾಹಿ ಪ್ರತಿಯೊಂದು ಎಪಿಸೋಡಗೆ ಕಾತುರದಿಂದ ಕಾಯುವಂತೆ ಮಾಡಿರುವುದಂತೂ ಸುಳ್ಳಲ್ಲ.
ಅಖಿಲಾಂಡೇಶ್ವರಿಯ ಅರಮನೆಗೆ ಲಗ್ಗೆ ಹಾಕಿದ ಹಳ್ಳಿಯ ಹುಡುಗಿ ಪಾರು ನೆಲೆಸಿ ಅಖಿಲಾಂಡೇಶ್ವರಿಯ ಪ್ರೀತಿ ಸಂಪಾದಿಸಿ ಮನೆಮಗಳಾಗಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಇವೆಲ್ಲದರ ಜತೆಗೆ ಆದಿತ್ಯ ಹರ್ಬಲ್ ಪ್ರಾಡಕ್ಟ್ ಕಂಪನಿಗೆ ರಾಯಭಾರಿಯಾಗಿರುವುದು ತಿಳಿದಿರುವ ವಿಚಾರ. ಆದರೆ ಅಖಿಲಾಂಡೇಶ್ವರಿ ಸಾಮ್ರಾಜ್ಯದ ರಾಯಭಾರಿ ಪಾರುವಿನ ಕೀರ್ತಿ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲೂ ಸಾಕಷ್ಟು ಸೌಂಡ್ ಮಾಡುತ್ತಿದೆ. ದೇಸಿ ಪ್ರಾಡಕ್ಟ್‌ಗಳು ವಿದೇಶಿಗರ ಗಮನ ಸೆಳೆಯಲು ತಮ್ಮ ಕಂಪನಿಯ ರಾಯಭಾರಿ ಪಾರುವಿನ ಅದ್ದೂರಿ ಪೋಟೊಶೂಟ್ ನಡೆಸಲಾಗಿದೆ.
ಅಂದಹಾಗೆ ಪಾರು ಧಾರಾವಾಹಿ ವಿಶಿಷ್ಟ ಕಥೆಯಬ್ನು ಒಳಗೊಂಡಿದೆ. ಹೊಸ ಹೊಸ ಟ್ವಿಸ್ಟ್ ಗಳು ಕುತೂಹಲ ಮೂಡುಸುತ್ತಿವೆ. ಈ ಪೋಟೊ ಶೂಟಿಂಗ್ ನಲ್ಲಿ ಒಂದು ರೀತಿಯ ಟ್ವಿಸ್ಟ್ ಸಿಕ್ಕಿದೆ. ಅಖಿಲಾಂಡೇಶ್ವರಿಗಿಂತ ನಾನೇನು ಕಮ್ಮಿ ಎಂದು ಬೀಗುತ್ತಿದ್ದ ಅನುಷ್ಕಾಗೆ ಮೋಸದ ಬಲೆ ಬೀಸಿ ಅಖಿಲಾಂಡೇಶ್ವರಿಯ ಪ್ರೀತಿ ಗಳಿಸಿ ಪಾರುವಿನ ಪೋಟೊ ಶೂಟ್ ಹೊತ್ತುಕೊಂಡು ಅಖಿಲಾಂಡೇಶ್ವರಿ ಒಪ್ಪುವ ರೀತಿಯಲ್ಲಿ ಮಾಡಿಸದೆ ಪಾರುಳಿಗೆ ತುಂಡುಗೆ ತೊಡಿಸಿ ಅವಮಾನ ಮಾಡಿದ್ದಾಳೆ.
ಅಖಿಲಾಂಡೇಶ್ವರಿ ಮತ್ತು ಆದಿತ್ಯ ತಮ್ಮ ಕಂಪನಿಯನ್ನು ಮತ್ತಷ್ಡು ಮೇಲಕ್ಕೇರಿಸೋ ಕನಸಿಗೆ ಈ ಫೋಟೊ ಶೂಟ್ ಮುಖ್ಯವಾಗಿತ್ತು. ಆದರೆ ಅನುಷ್ಕಾ, ಸಾಂಪ್ರದಾಯಿಕ ಉಡುಗೆಗೆ ಹೆಸರುವಾಸಿಯಾಗಿದ್ದ ಆದಿತ್ಯ ಗ್ರೂಪ್ ಆಫ್ ಕಂಪನಿಯ ರಾಯಭಾರಿ ಪಾರುಗೆ ವೆಸ್ಟರ್ನ್ ಉಡುಗೆ ತೊಡಿಸಿ ಅಖಿಲಾಂಡೇಶ್ವರಿ ಕುಟುಂಬಕ್ಕೆ ಗೌರವಕ್ಕೆ ಧಕ್ಕೆ ತರಲು ಮುಂದಾಗುತ್ತಾಳೆ. ಆದಿತ್ಯ ಮೆಚ್ಚಿದ ಕಂಗಳು ಪಾರುವಿನದ್ದೇ ಎಂದು ತಿಳಿದ ಅನುಷ್ಕಾಗೆ ಪಾರುವಿನ ಹೆಸರು ಕೆಡಿಸುವ ಸಂಚು ರೂಪಿಸಿ ಪೋಟೋ ಶೂಟ್‌ಗೆ ಒಪ್ಪಿಸಿರುತ್ತಾಳೆ.
ಅಖಿಲಾಂಡೇಶ್ವರಿ ಕಂಡ ಕನಸು ಸಾಕಾರಗೊಳಿಸಲು ಪೋಟೊ ಶೂಟ್ ಯಾವುದೇ ತೊಂದರೆಯಿಲ್ಲದೆ ನಡೀಬೇಕು. ಆದರೆ ಅನುಷ್ಕಾಳ ರಣತಂತ್ರ ಪಾರುಗೆ ಅವಮಾನ ಮಾಡಿ ಆದಿತ್ಯನ ಕನಸನ್ನು ನುಚ್ಚನೂರು ಮಾಡುತ್ತಾಳೆ.
ಪ್ರತಿ ರಾತ್ರಿ ೯.೩೦ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು ಮುಂದೆ ನಡೆಯುವ ಟ್ವಿಸ್ಟ್‌ಗಳು ಪ್ರೇಕ್ಷಕರನ್ನು ಕಾಯುವಂತೆ ಮಾಡಿದೆ. ಒಟ್ಟಾರೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಪ್ರೇಕ್ಷಕರ ಮನ್ನಣೆ ಗಳಿಸಿ ಮುನ್ನುಗ್ಗುತ್ತಿದೆ.

Leave a Comment