ಪೊಲೀಸ್ ಠಾಣೆ ಬಳಿಯೇ ದೇವಾಲಯದ ಹುಂಡಿ ಕಳವು

ಬೆಂಗಳೂರು,ಸೆ.೧೧-ಪೊಲೀಸ್ ಠಾಣೆ ಪಕ್ಕದಲ್ಲಿರುವ ದೇವಸ್ಥಾನಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹುಂಡಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ರಾಜಗೋಪಾಲನಗರದಲ್ಲಿ ನಡೆದಿದೆ.
ರಾಜಗೋಪಾಲ ನಗರದ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಶನಿಮಹಾತ್ಮ ದೇವಸ್ಥಾನಕ್ಕೆ ನುಗ್ಗಿರುವ ದುಷ್ಕರ್ಮಿಗಳು ಶಬ್ದ ಬಾರದಂತೆ ಗ್ಯಾಸ್ ಕಟರ್ ಬಳಸಿ ಮೂರು ಹುಂಡಿಯ ಬಾಗಿಲನ್ನು ಕತ್ತರಿಸಿ ಹಣ ದೋಚಿ ಪರಾರಿಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಹುಂಡಿಯಲ್ಲಿದ್ದ ಹಣ ತೆಗೆದಿರಲಿಲ್ಲ ಇದನ್ನು ತಿಳಿದುಕೊಂಡಿದ್ದ ದುಷ್ಕರ್ಮಿಗಳು ಸಂಚು ರೂಪಿಸಿ ಹುಂಡಿಗಳ ಕಳವು ಮಾಡಿ ಸುಮಾರು ೧೦ ಲಕ್ಷ ರೂ. ಹಣವನ್ನು ದೋಚಿದ್ದಾರೆ. ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Leave a Comment