ಪೊಲೀಸ್ ಅಧಿಕಾರಿಗಳಿಂದ ಜನಸಂಪರ್ಕ ಸಭೆ

ಧಾರವಾಡ, ಆ 27- ಧಾರವಾಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ವತಿಯಿಂದ ಆಗಸ್ಟ್ 27, 2018 ರಂದು ಮುಂಜಾನೆ 12-30 ಗಂಟೆಯಿಂದ ಮದ್ಯಾಹ್ನ 02-00 ಗಂಟೆಯವರೆಗೆ ಅಣ್ಣಿಗೇರಿ ತಾಲೂಕಿನ ಸಾರ್ವಜನಿಕ ಜನಸಂಪರ್ಕ ಸಭೆಯನ್ನು ಅಣ್ಣಿಗೇರಿ ಪುರಸಭೆ ಕಾರ್ಯಾಲಯಲ್ಲಿ ಹಮ್ಮಿಕೊಳ್ಳಲಾಗಿದೆ. ಆ ಕಾಲಕ್ಕೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವದು.  ಸರಕಾರಿ ಕೆಲಸಗಳಿಗೆ ಸಂಬಂದಿಸಿದಂತೆ ಭ್ರಷ್ಟಾಚಾರದ ಬಗ್ಗೆ ಯಾವುದಾದರು ದೂರು ಇದ್ದರೆ ಸಾರ್ವಜನಿಕರು ಜನಸಂಪರ್ಕ ಸಭೆಗೆ ಹಾಜರಾಗಿ ತಮ್ಮ ತಮ್ಮ ದೂರು ಅರ್ಜಿಗಳನ್ನು ಸಲ್ಲಿಸಬಹದು ಎಂದು ಧಾರವಾಡ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರಾದ ವಿ. ಆರ್. ಬಿಸನಳ್ಳಿ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Comment