ಪೊಲೀಸರ ಕೆನ್ನೆಗೆ ಬಾರಿಸಿದ್ದ ಆರೋಪಿ ಸೆರೆ

ಬೆಂಗಳೂರು, ಸೆ. ೧೨- ಸಂಚಾರ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪಿಯೊಬ್ಬನನ್ನು ಬಂಧಿಸಿ, ಉಳಿದಿಬ್ಬರ ಪತ್ತೆಗಾಗಿ ಬಸವೇಶ್ವರ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ವಿಜಯನಗರದ ಮೋದಿ ಬ್ರಿಡ್ಜ್ ಬಳಿ ನಿನ್ನೆ ರಾತ್ರಿ 8ರ ವೇಳೆ ಸಂಚಾರ ಸುಗಮಗೊಳಿಸುತ್ತಿದ್ದ ವಿಜಯನಗರ ಸಂಚಾರ ಪೊಲೀಸ್ ಠಾಣೆ ಪೇದೆ ಶಶಿಕುಮಾರ್ ಹಾಗೂ ಹೋಂಗಾರ್ಡ್ಸ್ ಮಹೇಶ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ರಂಗನಾಥ್ ಸೇರಿ ಮೂವರು, ಇಬ್ಬರ ಕೆನ್ನೆಗೆ ಬಾರಿಸಿ, ಹೊಟ್ಟೆಗೆ ಗುದ್ದಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ ಬಸವೇಶ್ವರ ನಗರ ಪೊಲೀಸರು, ಆರೋಪಿ ರಂಗನಾಥ್‌ನನ್ನು ಬಂಧಿಸಿ, ಉಳಿದಿಬ್ಬರ ಬಂಧನಕ್ಕೆ ಶೋಧ ನಡೆಸಿದ್ದಾರೆ.
ವಿಚಾರಣೆ ವೇಳೆ ರಂಗನಾಥ್, ಪೇದೆ ಶಶಿಕುಮಾರ್ ಹಾಗೂ ಮಹೇಶ್ ಅವರು, ಬೈಕ್‌ನಲ್ಲಿ ಬಂದ ನಮ್ಮನ್ನು ನಿಲ್ಲಿಸಿ ವಿನಾಕಾರಣ ನಿಂದಿಸಿದರು. ಇದರಿಂದ ಆಕ್ರೋಶಗೊಂಡು ಕೆನ್ನೆಗೆ ಬಾರಿಸಿದ್ದಾಗಿ ತಿಳಿಸಿದ್ದಾನೆ.
ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Comment