.ಪೊಲೀಸರು ಕರ್ತವ್ಯ ನಿಷ್ಠೆ ಮರೆಯಬಾರದು : ಬಸವರಾಜ ಬೊಮ್ಮಾಯಿ

ಮೈಸೂರು. ಅ.18: ಮುಂದಿನ ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್ ಮತ್ತು ಒಂದು ಸಾವಿರ ಸಬ್ ಇನ್ಸಪೆಕ್ಟರ್ ಹುದ್ದೆ ಭರ್ತಿಯಾಗಲಿದೆ ಎಂದು ಮೈಸೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಅಕಾಡೆಮಿಯ ಕವಾಯತು ಮೈದಾನದಲ್ಲಿ 42ನೇ ತಂಡದ ಆರಕ್ಷಕ ಉಪ ನಿರೀಕ್ಷಕರು(ಕೆಎಸ್ಐಎಸ್ಎಫ್) ಆರ್ ಎಸ್ ಐ(ಸಿಎಆರ್/ಡಿಎಆರ್)ಮತ್ತು ಸ್ಪೆಆರ್ ಎಸ್ಐ(ಕೆಎಸ್ ಆರ್ ಪಿ)ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಬಹುಮಾನ ವಿತರಿಸಿ ಮಾತನಾಡಿದರು. ಈ ವರ್ಷ 6 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇಲಾಖೆಯಲ್ಲಿ ಸುಧಾರಣೆಗಳನ್ನು ತರುತ್ತೇವೆ. ತಂತ್ರಜ್ಞಾನ ಹೆಚ್ಚಾದಂತೆ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ಸೈಬರ್ ಕ್ರೈಂನ್ನು ಭೇದಿಸುವುದು ಸವಾಲಿನ ಕೆಲಸವಾಗಿದೆ. ಈ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗುವುದು. ಪೊಲೀಸರು ಪ್ರಾಮಾಣಿಕವಾಗಿರಬೇಕು. ಕರ್ತವ್ಯ ನಿಷ್ಠೆ ಮರೆಯಬಾರದು. ಸತ್ಯವೇ ತಂದೆ, ನ್ಯಾಯವೇ ತಾಯಿ ಇದ್ದಂತೆ. ಸತ್ಯ ನ್ಯಾಯ ಎತ್ತಿ ಹಿಡಿಯುವ ಕೆಲಸ ಪೊಲೀಸರು ಮಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ರೈಫಲ್ ಫೈರಿಂಗ್ ಬಾನೆ ಸಿದ್ದಣ್ಣ, ಪ್ರೊ.ಆರ್.ಎಸ್.ಐ ಬೆಲೆಬಾಳುವ ಕಪ್, ಉತ್ತಮ ರಿವಾಲ್ವರ್ ಫೈರಿಂಗ್ ಸಂಜೀವ ಗಟ್ಟಿರಗಿ, ಪ್ರೊ.ಸ್ಪೆಆರ್.ಎಸ್.ಐ ಬೆಲೆಬಾಳುವ ಕಪ್, ಬೆಸ್ಟ್ ಡೈರೆಕ್ಟರ್ಸ್ ಅಸೆಸ್ ಮೆಂಟ್ ಉಮಾಶ್ರೀ ಕಲಕುಟಗಿ, ಪ್ರೊ.ಪಿಎಸ್ ಐ(ಕೆಎಸ್ಐಎಸ್ ಎಫ್), ಬೆಲೆಬಾಳುವ ಕಪ್, ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ರಘುರಾಜ್ ಎಸ್ ಪ್ರೊ.ಸ್ಪೆ ಆರ್ ಎಸ್ ಐ ಗೃಹಮಂತ್ರಿಗಳ ಕಪ್,ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಮಂಜಣ್ಣ ಪ್ರೊ.ಆರ್.ಎಸ್.ಐ, ಡಿಜಿ &ಐಜಿಪಿಯವರ ಕಪ್, ನಗದು, ಸರ್ವೋತ್ತಮ ಪ್ರಶಿಕ್ಷಣಾರ್ಥಿ 2ನೇ ಸ್ಥಾನ ರಘುರಾಜ್ ಎಸ್.ಪ್ರೊ.ಸ್ಟೆ ಆರ್ ಎಸ್ ಐ ಬೆಲೆಬಾಳುವ ಕಪ್, ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಅರ್ಪಿತಾ ರೆಡ್ಡಿ, ಪ್ರೊ.ಪಿಎಸ್ ಐ (ಕೆಎಸ್ಐಎಸ್ಎಫ್), ಗೃಹಮಂತ್ರಿಗಳ ಟ್ರೋಫಿ, ಸರ್ವೋತ್ತಮ ಪ್ರಶಿಕ್ಷಣಾರ್ಥಿ ಚರಣ್ ಎಸ್.ಪ್ರೊ.ಪಿಎಸ್ಐ ಮುಖ್ಯಮಂತ್ರಿಗಳ ಟ್ರೋಫಿಯನ್ನು ಬಹುಮಾನವಾಗಿ ಪಡೆದಿರುತ್ತಾರೆ.
ಈ ಸಂದರ್ಭ ಪೊಲೀಸ್ ಮಹಾ ನಿರ್ದೇಶಕ ಪದಮ್ ಕುಮಾರ್ ಗರ್ಗ್, ಪೊಲೀಸ್ ಮಹಾ ನಿರೀಕ್ಷಕ ರವಿ ಎಸ್, ಪೊಲೀಸ್ ಮಹಾ ನಿರೀಕ್ಷಕ ವಿಫುಲ್ ಕುಮಾರ್ ಬೋಧಕ ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Leave a Comment