ಪೊಲೀಸರಂತೆ ವೇಷ ಹಾಕಿಕೊಂಡು ಮಹಿಳೆ ಅತ್ಯಾಚಾರ

ಹೈದರಾಬಾದ್,ಫೆ.14:ಹೈದರಾಬಾದ್ ಪಶುವೈದ್ಯೆ ದಿಶಾ ಅತ್ಯಾಚಾರದ ಕಹಿ ನೆನಪು ಮಾಸುವ ಮುನ್ನವೇ ತೆಲಂಗಾಣದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

ಬಸ್‌ನಲ್ಲಿ ಸಂಚರಿಸುತ್ತಿದ್ದ 32 ವರ್ಷದ ಮಹಿಳೆಯನ್ನು ಪೊಲೀಸರ ವೇಷ ಹಾಕಿಕೊಂಡು ಯಾಮಾರಿಸಿದ ಮೂವರು ದುರುಳರು, ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಚಾರ ಎಸಗಿರುವ ಘಟನೆ ಕಳೆದ ಗುರುವಾರ ರಾತ್ರಿ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ. ನಂಬಿ ಬಂದ ಪ್ರಿಯತಮೆ ಮೇಲೆ 8 ಸ್ನೇಹಿತರ ಜೊತೆ ಸೇರಿ ರೇಪ್ ಆರೋಪಿಗಳು ಅತ್ಯಚಾರ ಎಸಗಿ ತಲೆಮರೆಸಿಕೊಂಡು ತಿರುಗಾಡುವಾಗ ಪೊಲೀಸ್ ತಂಡ ಗಮನಿಸಿದ ಸೋಮ ಚಾರೈ ಮತ್ತು ಬ್ರಹ್ಮ ಚಾರೈ ಕಾರಿನಲ್ಲಿ ಪರಾರಿಯಾಗಿದ್ದರು. ಈ ವೇಳೆ ಅವರ ಕಾರ್ ಅಪಘಾತವಾಗಿತ್ತು.

ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಸಿಸಿಟಿವಿ ನೆರವಿನೊಂದಿಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Comment