ಪೈರಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ- ಸುದೀಪ್‌ ಎಚ್ಚರಿಕೆ

ಬೆಂಗಳೂರು: ‘ಪೈರಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ, ನಾನು ಸುಮ್ಮನಿರಲ್ಲ’ ಅಂತ ನಟ ಕಿಚ್ಚ ಸುದೀಪ್‌ ಅವರು ಟ್ವಿಟ್‌ ಮಾಡಿದ್ದಾರೆ.

ಕಳೆದ ವಾರ ಪೈಲ್ವಾನ್ ಚಿತ್ರದ ಪೈರಸಿ ಬಗ್ಗೆ ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ.ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ. ಅಂತ ಬರೆದುಕೊಂಡಿದ್ದರು.

ಇದರ ಬೆನ್ನಲೇ ಈಗ ಅವರು ‘ಪೈರಸಿ ಹಾಗೂ ಬಂಧನದ ಬಗ್ಗೆ ಮಾಹಿತಿ ಕೇಳುತ್ತಿದ್ದವರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಬೆಂಬಲದಲ್ಲಿ ಎಂಎಲ್‍ಸಿಯಿಂದ ಕರೆ ಅನಿವಾರ್ಯವೇ? ನನಗೆ ಇದರ ಅವಶ್ಯಕತೆ ಇಲ್ಲ ಅಂತ ನನಗೆ ಅನಿಸುತ್ತದೆ ಇದಲ್ಲದೇ ನನ್ನ ಜೊತೆ ನನ್ನ ಸ್ನೇಹಿತರು ಇದ್ದಾರೆ. ನಾನು ಸುಮ್ಮನಿರಲ್ಲ. ಮತ್ತೆ ಧ್ವನಿ ಎತ್ತುತ್ತೇನೆ’ ಎಂದು ಅವರು ಹೇಳಿದ್ದಾರೆ.

Leave a Comment