ಪೆಟ್ರೋಲ್ ಬೆಲೆ ಏರಿಕೆ: ಹಸನ್ ರೂಹಾನಿ ಸಮರ್ಥನೆ

ಟೆಹರಾನ್,  ನ  19 –  ಇರಾನಿನಲ್ಲಿ  ಅಭದ್ರತೆ, ಆಶಾಂತಿ ವಾತವರಣ ಮೂಡಿಸಲು ಯತ್ನಿಸುವವರಿಗೆ ಅವಕಾಶ  ನೀಡುವುದಿಲ್ಲ  ಎಂದು  ಅಧ್ಯಕ್ಷ ಹಸನ್ ರೂಹಾನಿ ಎಚ್ಚರಿಕೆ ನೀಡಿದ್ದು,  ಜೊತೆಗೆ ವಿವಾದಾಸ್ಪದ ಪೆಟ್ರೋಲ್ ಬೆಲೆ ಏರಿಕೆಯನ್ನು  ಸಮರ್ಥಿಸಿಕೊಂಡಿದ್ದಾರೆ.

 ಬೆಲೆ  ಏರಿಕೆ ವಿರೋಧಿಸಿ ನಡೆದ ಗಲಭೆಯಲ್ಲಿ ಹಲವರು  ಮೃತಪಟ್ಟ ನಂತರ  ಅವರು ಈ ಎಚ್ಚರಿಕೆ ನೀಡಿದ್ದಾರೆ. ಗಲಭೆಯನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಈಗಾಗಲೇ ಹಲವರನ್ನು  ಜನರನ್ನು ಬಂಧಿಸಿದ್ದಾರೆ ಹಾಗೂ ಇಂಟರ್ ನೆಟ್  ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ.

‘ಪ್ರತಿಭಟನೆ  ಜನರ ಹಕ್ಕು ನಿಜ ಆದರೆ  ಪ್ರತಿಭಟನೆ ಬೇರೆ, ಗಲಭೆ ಬೇರೆ. ಸಮಾಜದಲ್ಲಿ ಅಶಾಂತಿ ಮೂಡಿಸಲು  ಅವಕಾಶವಿಲ್ಲ  ಎಂದೂ  ಎಚ್ಚರಿಸಿದರು. ಜನರ ಪ್ರತಿಭಟನೆಗಳಿಗೆ ಕಾರಣವಾದ ಪೆಟ್ರೋಲ್ ಬೆಲೆ ಏರಿಕೆಯನ್ನು ರೂಹಾನಿ ಸಮರ್ಥಿಸಿಕೊಂಡಿದ್ದಾರೆ.

ತೀವ್ರ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಗಳಿಗೆ ಹಣ ಒದಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದೂ  ಅವರು ಸಮಜಾಯಿಸಿ ನೀಡಿದ್ದಾರೆ.

Leave a Comment