ಪೆಟ್ರೋಲ್,ಡೀಸೆಲ್ ಬದಲು ಎಥನಾಲ್ ಬಳಸಿ; ಗಡ್ಕರಿ

ಛತ್ತೀಸ್‌ಘಡ, ಸೆ.೧೧-ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಎಥೆನಾಲ್ ಬಳಸುವಂತೆ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರೈತರಿಗೆ ಕರೆ ನೀಡಿದ್ದಾರೆ. ಶೀಘ್ರದಲ್ಲಿ ಐದು ಎಥೆನಾಲ್ ಘಟಕಗಳು ಶೀಘ್ರ ಆರಂಭವಾಗಲಿದೆ. ಇದು ಕಾರ್ಯಾರಂಭ ಮಾಡಿದರೆ ಪ್ರತಿ ಲೀಟರ್ ಡೀಸೆಲ್ ೫೦ ಹಾಗೂ ಪೆಟ್ರೋಲ್ ೫೫ ರೂಗಳಿಗೆ ದೊರೆಯಲಿದೆ ಎಂದು ಅವರು ತಿಳಿಳಿಸಿದ್ದಾರೆ.
ದುರ್ಗ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೮ ಲಕ್ಕ ಕೋಟಿ ರೂ ಪಾವತಿಸಿ ಇಂಧನ ಖರೀದಿ ಮಾಡುತ್ತಿದ್ದೇವೆ. ಆದರೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿದೆ. ಜೈವಿಕ ಇಂಧನದ ಮೂಲಕ ವಿಮಾನ ಹಾರಾಟ ಮಾಡುತ್ತಿರುವಾಗ ಜೈವಿಕ ಇಂಧನದಿಂದ ವಾಹನ ಓಡಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ. ಈ ಮಾತನ್ನು ೧೫ ವರ್ಷಗಳಿಂದಲೂ ಹೇಳುತ್ತಿರುವುದಾಗಿ ತಿಳಿಸಿದರು. ಕಳೆದ ಕೆಲವು ವಾರಗಳಿಂದ ಹಲವು ರಾಜ್ಯಗಳಲ್ಲಿ ಇಂಧನ ದರ ಗಗನಮುಖಿಯಾಗಿ ವಾಹನ ಸವಾರರ ಕೈ ಸುಡುತ್ತಿದೆ. ಅದರಲ್ಲು ಪೆಟ್ರೋಲ್ ದರ ಪ್ರತಿ ಲೀಟರ್ ೯೦ ರೂ ಸಮೀಪಕ್ಕೆ ಬಂತು ನಿಂತಿದೆ. ಈಗ ತ್ವರಿತಗತಿಯಲ್ಲಿ ಎಥನಾಲ್ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

Leave a Comment