ಪೆಟ್ರೋಲಿಯಂ ಮಾರುಕಟ್ಟೆ ಐ.ಓ.ಸಿ. ಅಗ್ರಪಾಲು

ಬೆಂಗಳೂರು, ಅ. ೨೩- ನಗರದ ಹೊರವಲಯದಲ್ಲಿ 93 ಎಕರೆ ಪ್ರದೇಶದಲ್ಲಿರುವ ಇಂಡಿಯನ್ ಆಯಿಲ್‌ನ ದೇವನಗೊಂತಿ ಬಾಟ್ಲಿಂಗ್ ಪ್ಲಾಂಟ್ ಅತ್ಯಧಿಕ ಸಾಮರ್ಥ್ಯವುಳ್ಳ ಘಟಕವಾಗಿದ್ದು, ಪ್ರತಿನಿತ್ಯ ಒಂದು ಲಕ್ಷ ಸಿಲಿಂಡರ್‌ಗಳನ್ನು ಭರ್ತಿ ಮಾಡುವ ಸಾಮರ್ಥ್ಯವುಳ್ಳ ಘಟಕವಾಗಿ ಹೊರಹೊಮ್ಮಿದೆ.
ಕೌಟುಂಬಿಕ ಅಗತ್ಯದ 14.2 ಕಿಲೋ, 5 ಕಿಲೋ ಸೇರಿದಂತೆ, ವಾಣಿಜ್ಯ ಉದ್ದೇಶದ 19 ಕಿಲೋ, 5 ಕಿಲೋ, 45.5 ಕಿಲೋ, 425 ಕಿಲೋ ಮತ್ತು ನ್ಯಾನೋ ಕಟ್ ಸಿಲಿಂಡರ್ ಸೇರಿದಂತೆ, ಪ್ರತಿನಿತ್ಯ ಒಂದು ಲಕ್ಷ ಸಿಲಿಂಡರ್‌ಗಳನ್ನು ದೇವನಗೊಂತಿ ಇಂಡಿಯನ್ ಆಯಿಲ್ ಘಟಕದಲ್ಲಿ ಭರ್ತಿ ಮಾಡಲಾಗುತ್ತಿದೆ.
ಘಟಕದಲ್ಲಿ 2 ಸಾಂಪ್ರದಾಯಿಕ ಬುಲೆಟ್ ಟ್ಯಾಂಕ್, 3 ಮೌಂಡೆಡ್ ಬುಲೆಟ್‌ಗಳು ಮತ್ತು ಹಾರ್ಟನ್ ಸ್ಪೈಯರ್‌ಗಳಿಂದ 6,650 ಎಂಟಿ ಸಂಗ್ರಹ ಸಾಮರ್ಥ್ಯವನ್ನು ಘಟಕ ಹೊಂದಿದ್ದು, ಮೂರು 24 ಫಿಲ್ಲಿಂಗ್ ಪಾಯಿಂಟ್ ಕರೋಸೆಲ್‌ಗಳು ಮತ್ತು ಹೊಸದಾಗಿ ಆರಂಭಿಸಿರುವ 48 ಫಿಲ್ಲಿಂಗ್ ಪಾಯಿಂಟ್ ಕರೋಸೆಲ್ ಹೊಂದಿದೆ.
ಪ್ರತಿ ತಿಂಗಳು 1,800 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿಯನ್ನು ಘಟಕ ಪೂರೈಸುತ್ತಿದ್ದು, ಇದು ಭಾರತದಲ್ಲೇ ಅತಿಹೆಚ್ಚು ಬಾಟ್ಲಿಂಗ್ ಪಾಯಿಂಟ್‌ಗಳ ಡಿಸ್‌ಪ್ಯಾಚ್ ಕೇಂದ್ರವಾಗಿದೆ. ಕರ್ನಾಟದಲ್ಲಿರುವ 42 ಆಟೋ ಎಲ್‌ಪಿಜಿ ವಿವೇವಾರಿ ಕೇಂದ್ರಗಳಿಗೆ ಈ ಘಟಕದಿಂದ ಗ್ಯಾಸ್ ಪೂರೈಸಲಾಗುತ್ತಿದೆ.
ಮಂಗಳೂರು ಎಂಎಲ್‌ಐಎಫ್ ಮತ್ತು ಚೆನ್ನೈ ಐಪಿಪಿಎಲ್‌ಗಳಿಂದ ಬುಲೆಟ್ ಟ್ರಕ್‌ಗಳ ಮೂಲಕ ಉತ್ಪನ್ನ ಸ್ವೀಕರಿಸಲು ಅರ್ಹವಾಗಿರುವ ದೇಶದ ನಾಲ್ಕು ಘಟಕಗಳಲ್ಲಿ ದೇವನಗೊಂತಿ ಬಾಟ್ಲಿಂಗ್ ಘಟಕ ಸಹ ಒಂದಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕರ್ನಾಟಕದಲ್ಲಿ ವಾರ್ಷಿಕ 5 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನ ಮಾರಾಟ ಮಾಡುವ ಮೂಲಕ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಶೇ. 44.1 ರಷ್ಟು ಪಾಲನ್ನು ಹೊಂದಿದ್ದು, 2019-20ನೇ ಸಾಲಿನಲ್ಲಿ ಉಜ್ವಲ ಯೋಜನೆಯಡಿ 1.47 ಲಕ್ಷ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
21 ಕೋಟಿ ವೆಚ್ಚದ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಗ್ಯಾಸ್ ಘಟಕದಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದ್ದು, ಗ್ರಾಹಕರಿಕೆ ಸಿಲಿಂಡರ್ ವಿತರಿಸುವ ಮೊದಲು ಸಿಲಿಂಡರ್ ಸುರಕ್ಷತೆ ಕುರಿತು ಖಾತರಿ ಪಡಿಸಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಭಾರತ್ ಪೆಟ್ರೋಲಿಯಂ 3 ಟ್ರಮಿನಲ್‌ಗಳು, 5 ಡಿಪೋಗಳು ಹಾಗೂ 4 ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಭರ್ತಿ ಮಾಡುವ ಘಟಕಗಳು, 4 ವಿಮಾನ ಪೆಟ್ರೋಲ್ ಘಟಕಗಳು, 192 ಸೀಮೆಎಣ್ಣೆ ಡೀಲರ್, 1990 ಪೆಟ್ರೋಲ್ ಮತ್ತು ಡೀಸೆಲ್ ಪಂಪುಗಳು, 550 ಎಲ್‌ಪಿಜಿ ಗ್ಯಾಸ್ ವಿತರಣಾ ಕೇಂದ್ರಗಳು, 51 ಸ್ವಯಂಚಾಲಿತ ಗ್ಯಾಸ್ ಸ್ಟೇಷನ್‌ಗಳು ಮತ್ತು 11 ಸಿಎನ್‌ಜಿ ಮಾರಾಟ ಕೇಂದ್ರಗಳನ್ನು ಹೊಂದಿರುವುದಾಗಿ ತಿಳಿಸಿದರು. ಟ್ರಮಿನಲ್‌ನಿಂದ ವಿಮಾನಗಳ ಇಂಧನ ಪೂರೈಕೆಯಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಪೈಪ್‌ಲೈನ್ ಸಂಪರ್ಕ ಹೊಂದಿದೆ.
– ಪ್ರಮೋದ್,
ಕಾರ್ಯಕಾರಿ ನಿರ್ದೇಶಕರು, ಐಒಸಿ.

Leave a Comment