ಪೂರ್ವಜರು ವೈಜ್ಞಾನಿಕ ಮನೋಭಾವ ಹೊಂದಿದ್ದರು

ಧಾರವಾಡ,ಮಾ13: ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ವಿಜ್ಞಾನ ಸಂಘದವತಿಯಿಂದ “ನವಧಾರಾ-2018” ಉತ್ಸವವನ್ನು ಆಯೋಜಿಸಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕರು ಹಾಗೂ ವಿದ್ಯಾರ್ಥಿ ಮಾರ್ಗದರ್ಶಕರಾದ  ಮುಕುಂದ ಮೈಗೂರ ಅವರು ಆಗಮಿಸಿ ಮಾತನಾಡುತ್ತಾ ‘ನಮ್ಮ ಪೂರ್ವಜರು ವೈಜ್ಞಾನಿಕ ಮನೋಧರ್ಮದವರಾಗಿದ್ದರು. ಮಗು ಗರ್ಭದಲ್ಲಿರುವಾಗ ಕ್ರಿಯಾಶೀಲತೆ ಪ್ರಾರಂಭವಾಯಿತೆಂದರೆ ತಾಯಿಗೆ ಭಯಕೆಗಳು ಪ್ರಾರಂಭವಾಗುತ್ತವೆ. ಅದರಿಂದ ತಾಯಿಗೆ ಮಗು ಬೆಳೆಯುವ ಹಂತಗಳು ತಿಳಿಯುತ್ತದೆ. ಹೀಗೆ ವ್ಯಕ್ತಿ ಅನುಭವ, ಅನುಭಾವದ ಮೂಲಕ ಹಾಗೂ ಊಹನಾ ಸಿದ್ಧಾಂತದ ಮೂಲಕ ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ಇಂದು ಜ್ಞಾನ-ವಿಜ್ಞಾನ, ತಂತ್ರಜ್ಞಾನ, ಮಾನವಜ್ಞಾನಕ್ಕೆ ಬಂದು ಮುಟ್ಟಿದ್ದಾನೆ. ಇದರಲ್ಲಿ ಇಂದೇ ಹುಟ್ಟಿ ಇಂದೆ ಬೆಳೆದದ್ದಲ್ಲ. ನಮ್ಮ ಪೂರ್ವಜರಿಂದ ಕ್ರಮ ಕ್ರಮವಾಗಿ, ಹಂತ-ಹಂತವಾಗಿ ವಿಕಾಸದ ಘಟ್ಟಗಳ ಬೆಳವಣಿಗೆಗಳಾಗಿ ನಡೆದು ಬಂದಿದೆ. ಇಂದು ವಿಜ್ಞಾನದ ವಿದ್ಯಾರ್ಥಿಗಳು ತಾವು ಬದುಕುತ್ತಿರುವ ನೆಲದ ಸಂಸ್ಕøತಿಯ ಆಧಾರದ ಮೇಲೆ ವಿಜ್ಞಾನ ಕಲಿಕೆ ನಡೆಯಬೇಕು ಎಂದು ಹೇಳಿದರು. ಜೆ.ಎಸ್.ಎಸ್. ಕಾಲೇಜಿನ ಅಭಿವೃದ್ಧಿ ಅಧಿಕಾರಿಗಳಾದ ಪ್ರೊ. ಸೂರಜ್ ಜೈನ್ ಅವರು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಈ ಕಾಲೇಜಿನ ವಿಜ್ಞಾನ ಸಂಘದ ವೇದಿಕೆ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ಜಿ.ಕೃಷ್ಣಮೂರ್ತಿಯವರು ಅಧ್ಯಕ್ಷಸ್ಥಾನವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಜ್ಞಾನ ಸಂಘದ ಕಾರ್ಯಾಧ್ಯಕ್ಷರಾದ ಪ್ರೊ. ಐ.ಐ. ನಧಾಪ ಅವರು ಸ್ವಾಗತಪರಿಚಯ ಮಾಡಿದರು. ಕಾರ್ಯದರ್ಶಿಗಳಾದ ಡಾ. ಆರ್.ಟಿ. ಮಹೇಶ ಅವರು ವಂದಿಸಿದರು. ಕು. ರಾಹುಲ ಹುಕ್ಕೇರಿ, ಕು. ಶೃತಿ ಇಸ್ಲಾಂಪುರೆ ನಿರೂಪಿಸಿದರು. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment