ಪೂರ್ಣ ಆರೋಹಣವಾಗದ ಧ್ವಜ

ಚಿತ್ರ: ಧ್ವಜ
ನಿರ್ದೇಶನ: ಅಶೋಕ್ ಕಶ್ಯಪ್
ತಾರಾಗಣ: ರವಿ, ಪ್ರಿಯಾಮಣಿ, ದಿವ್ಯ ಉರುಡುಗ,ಟಿ,ಎನ್ ಸೀತಾರಾಮ್, ವೀಣಾ ಸುಂದರ್,ತಬಲ ನಾಣಿ,ಸುಂದರ್ ರಾಜ್ ಮತ್ತಿತರರು
ರೇಟಿಂಗ್: **

ರಾಜಕೀಯ ಥ್ರಿಲ್ಲರ್.ಪ್ರೀತಿ,ಪ್ರೇಮದ ಅಂಶಗಳನ್ನು ಒಳಗೊಂಡಿರುವ ಚಿತ್ರ ’ಧ್ವಜ”. ಲವ್ವರ್‍ಸ್‌ಗಳಿಬ್ಬರು ರಾಜಕೀಯ ಅಖಾಡದಲ್ಲಿ ಎದುರು ಬದುದಾದರೆ ಏನಾಗಹುದು ಎನ್ನುವ ಕುತೂಹಲದೊಂದಿಗೆ ತೆರೆಗೆ ಬಂದಿರುವ ಚಿತ್ರ ಇದು.
ನಿರ್ದೇಶಕ ಅಶೋಕ್ ಕಶ್ಯಪ್,ರಾಜಕೀಯ ಹಿನ್ನೆಲೆ, ಅಲ್ಲಿಯ ತಂತ್ರ, ಪ್ರತಿತಂತ್ರ ಕುತಂತ್ರಗಳನ್ನೇ ಬಂಡವಾಳ ಮಾಡಿಕೊಂಡು ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಇಡೀ ಚಿತ್ರವನ್ನು ನಾಯಕಿ ಪ್ರಿಯಾಮಣಿ ತಮ್ಮ ಅಭಿನಯದಿಂದ ಆವರಿಸಿಕೊಂಡು ಬಿಟ್ಟಿದ್ದಾರೆ.ಅವರ ಮುಂದೆ ನಾಯಕ ಸಪ್ಪೆಯಾಗಿ ಕಾಣುತ್ತಾರೆ. ಎರಡೂ ಪಾತ್ರಗಳೂ ಕೂಡ ರಮ್ಯ ಮುಂದೆ ವರ್ಕೌಟ್ ಆಗಿಲ್ಲ.
ಚಿಕ್ಕಂದಿನಿಂದಲೇ ಪಕ್ಷದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡ ಧ್ವಜ (ರವಿ) ನಿಗೆ ಪಕ್ಷವೇ ಆತನಿಗೆ ಉಸಿರು. ಮತ್ತೊಂದೆಡೆ ರಮ್ಯ( ಪ್ರಿಯಾಮಣಿ) ಚಿಕ್ಕಂದಿನಿಂದಲೇ ರಾಜಕಾರಣದ ಬಗ್ಗೆ ಅಪಾರ ಕನಸು ಕಟ್ಟಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡಿದವಳು. ಆಡಳಿತ -ವಿರೋದ ಪಕ್ಷಕ್ಕೆ ಸೇರಿದವರಾದರೂ ಇಬ್ಬರ ಮಧ್ಯೆ ಪ್ರೀತಿ. ರಾಜಕಾರಣ ತಮ್ಮ ಮಧ್ಯೆ ಸುಳಿಯಬಾರದೆನ್ನುವ ಮನಸ್ಥಿತಿಯವರು.
ಜನಾ ಅಲಿಯಾಸ್ ಜನಾರ್ಧನ (ರವಿ) ಪ್ರಾಧ್ಯಾಪಕ. ರಾಜಕೀಯ ಅಪ್ಪನನ್ನು ಬಲಿ ತೆಗೆದುಕೊಂಡಿದೆ. ಅಣ್ಣ ಒಬ್ಬನೆ ಇದ್ದಾನೆ ಸಾಕು ಎನ್ನುವ ಮೃಧು ಸ್ವಭಾವದವ. ಮೊಟ್ಟೆ ಮಹಾಲಕ್ಷ್ಮಿ (ದಿವ್ಯ ಉರುಡುಗ) ಅಣ್ಣ ರಫ್ ಅಂಡ್ ಟಫ್. ಇಂತವರ ಮಧ್ಯೆಯ ಪ್ರೀತಿಯ ಮೊಳಕೆ ಚಿಗುರೊಡೆಯುತ್ತದೆ.
ಮತ್ತೊಂದೆಡೆ ಧ್ವಜನ ರಾಜಕೀಯದಲ್ಲಿ ಏಳಿಗೆ ಸಹಿಸಲಾರದ ಮಂದಿ ಪ್ರಿಯತಮೆ ರಮ್ಯ ವಿರುದ್ದ ಎತ್ತಿಕಟ್ಟಿ ಆಕೆಯ ವಿರುದ್ದವೇ ಸ್ಪರ್ಧೆ ಮಾಡುವಂತಾಗುತ್ತದೆ. ಇಂತಹ ಸಮಯದಲ್ಲಿ ಸೋಲಿನ ಭೀತಿಯಿಂದ ರಮ್ಯ ಪ್ರಿಯಕರನ ಕೊಲೆಗೆ ಸ್ಕೆಚ್ ಹಾಕುತ್ತಾಳೆ. ಆಕೆಯ ಪ್ರಯತ್ನ ಸಫಲವಾಗುತ್ತಾನಾ? ಅಂದುಕೊಂಡಿದ್ದನ್ನು ಆಕೆ ಸಾಧಿಸುತ್ತಾಳಾ?
ಇತ್ತ ಧ್ವಜನ ತಮ್ಮ ಜನ ಮುಂದೇನು ಮಾಡುತ್ತಾನೆ ಎನ್ನುವುದು ಚಿತ್ರದ ತಿರುಳು.
ನಿರ್ದೇಶಕ ಅಶೋಕ್ ಕಶ್ಯಪ್, ನಾಯಕ ರವಿಯೇ ನಿರ್ಮಾಪಕರಾಗಿರುವುದರಿಂದ ನೀನು ಮಾಡಿದ ನಟನೆಯೇ ಸೂಪರ್ ಎಂದು ಹಾಡಿ ಹೊಗಳಿದಂತಿದೆ. ಅವರಿಂದ ನಟನೆ ತಗೆಸುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ.
ಪ್ರಿಯಾಮಣಿ ಪಾತ್ರವನ್ನು ಜೀವಿಸಿಕೊಂಡು ಬಿಟ್ಟಿದ್ದಾರೆ. ಟಿ.ಎನ್ ಸೀತಾರಾಮ್, ದಿವ್ಯ ಉರುಡುಗ,ವೀಣಾ ಸುಂದರ್, ಸುಂದರ್ ರಾಜ್ ಪಾತ್ರ ಪಾತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಾಹಣ,ಸಂತೋಷ್ ನಾರಾಯಣ್ ಸಂಗೀತ ಚಿತ್ರಕ್ಕಿದೆ.

Leave a Comment