ಪೂರ್ಣಿಮಾ ಟ್ರಸ್ಟ್ : ಬಡವರಿಗೆ ಊಟ ವಿತರಣೆ

ರಾಯಚೂರು.ಏ.02- ಕೊರೊನಾ ಭೀತಿಯಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರು ಎದುರಿಸುತ್ತಿರುವ ಹಸಿವಿನ ಸಮಸ್ಯೆ ನೀಗಿಸಲು ಪೂರ್ಣಿಮಾ ಶಿಕ್ಷಣ ಸಂಸ್ಥೆ ವತಿಯಿಂದ ಪ್ರತಿನಿತ್ಯ ಅನ್ನ ಪ್ಯಾಕೇಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಮಾ.27 ರಿಂದ ವಿವಿಧ ಬಡಾವಣೆಗಳಲ್ಲಿ ಅನ್ನದ ಪ್ಯಾಕೇಟ್ ಹಾಗೂ ಅಕ್ಕಿ, ಬೇಳೆ ಸೇರಿದಂತೆ ಇನ್ನಿತರ ದಿನಸು ವಸ್ತುಗಳು ವಿತರಿಸಲಾಗುತ್ತಿದೆ. ಇದುವರೆಗೂ 10 ಕ್ವಿಂಟಾಲ್ ಅಕ್ಕಿ, 2 ಕ್ವಿಂಟಾಲ್ ಬೇಳೆ ವಿತರಿಸಲಾಗಿದೆ. ಪೂರ್ಣಿಮಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಲ್.ಕೇಶವರೆಡ್ಡಿ ಮತ್ತು ಉಪಾಧ್ಯಕ್ಷರಾದ ರೇಖಾ ಕೇಶವರೆಡ್ಡಿ ಅವರು ಸಂಕಷ್ಟದ ಸ್ಥಿತಿಯಲ್ಲಿ ಸಾರ್ವಜನಿಕರಿಗೆ ನೆರವಿನ ಹಸ್ತ ಚಾಚುತ್ತಾರೆ.
ಕೊರೊನಾ ಭೀತಿಯಿಂದ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ ಕಾರಣ ಬಡ ಜನರಿಗೆ ಊಟದ ಗಂಭೀರ ಸಮಸ್ಯೆ ಎದುರಾಗುವಂತೆ ಮಾಡಿದೆ. ಈ ಸಮಸ್ಯೆ ನಿವಾರಣೆಗೆ ಟ್ರಸ್ಟ್ ವತಿಯಿಂದ ತಮ್ಮದೇಯಾದ ರೀತಿಯಲ್ಲಿ ಊಟದ ವ್ಯವಸ್ಥೆಗೆ ಮುಂದಾಗುವ ಮೂಲಕ ಕೇಶವರೆಡ್ಡಿ ಮತ್ತು ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ.

Leave a Comment