ಪೂರ್ಣಗೊಂಡ ಹಾಯ್

ಹೊಸಬರ ತಂಡ ಹೊಸ ಕನಸು ಕಟ್ಟಿಕೊಂಡು ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಿದ್ದ “ಹಾಯ್ ಚಿತ್ರ ಕಡೆಗೂ ಅಡೆತಡೆ ದಾಟಿ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಬಿಡುಗಡೆಗೆ ಸಿದ್ದಗೊಂಡಿದೆ.

ಎನ್‌ಸಿಸಿ ಕ್ಯಾಂಪ್‌ನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ನಿರ್ದೇಶಕ ಜಿ.ಎನ್ ರುದ್ರೇಶ್ ಮೊದಲ ಭಾರಿಗೆ ನಿರ್ದೇಶನ ಮಾಡಿರುವ ಚಿತ್ರ ಇದಾಗಿದೆ. ರಾಘವೇಂದ್ರ ಕಠಾರಿ ಹಾಗು ಸಿ ರಾಜೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಾಘವೇಂದ್ರ ಕಠಾರಿ ಅವರ ಸಹೋದರ ದೇವು ಎಸ್ ರಾಜ್ ಚಿತ್ರಕ್ಕೆ ನಾಯಕ. ಚೆನ್ನೈನ ಹುಡುಗಿ ಸಾನಿಯಾ ನಾಯಕಿ. ಜೆಸಿಗಿಫ್ಟ್ ಸಂಗೀತ ಚಿತ್ರದಕ್ಕಿದೆ.

ಕಳೆದವಾದ ಚಿತ್ರದ ಬಗ್ಗೆ ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮದ ಮುಂದೆ ಮುಖಾಮುಖಿಯಾಗಿತು. ಮೊದಲು ಮಾತಿಗಿಳಿದ ನಿರ್ದೇಶಕ ರುದ್ರೇಶ್, ಮೂರು ವರ್ಷಗಳ ಹಿಂದೆ ಚಿತ್ರ ಆರಂಭವಾಗಿತ್ತು. ಕೆಲ ಕಾರಣಾಂತರಗಳಿಂದ ವಿಳಂಬವಾಗಿತ್ತು. ಈಗ ಚಿತ್ರ ಸಿದ್ದಗೊಂಡಿದ್ದು ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವೊಂದಲಾಗಿದೆ. ಚಿತ್ರ. ಫ್ಯಾಮಿಲಿ ಸಮೇತ ನೋಡಬಹುದಾದ ಕಾಮಿಡಿ ಮತ್ತು ನವಿರಾದ ಪ್ರೇಮಕಥೆಯನ್ನು ಚಿತ್ರ ಒಳಗೊಂಡಿದೆ.

ದಾವಣಗೆರೆಯ ಕೊಂಡಜ್ಜಿಯಲ್ಲಿ ೧೫ ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಎರಡು ಹಾಡುಗಳನ್ನು ಬ್ಯಾಂಕಾಂಕ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ವಿವರ ನೀಡಿದರು. ನಟ, ದೇವು ಎಸ್ ರಾಜ್, ಸಾಮಾನ್ಯವಾಗಿ ಮೊದಲ ಬಾರಿ ಭೇಟಿಯಾದಾದ ಹಾಯ್ ಎನ್ನುತ್ತೇವೆ. ಸ್ನೇಹಿತನ ಜೀವನದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಚಿತ್ರ ಮಾಡಲಾಗಿದೆ.ನಟನೆಯ ಬಗ್ಗೆ ಎನೂ ಗೊತ್ತಿರಲಿಲ್ಲ.ಚಿತ್ರದ ಟ್ರೈಲರ್ ನೋಡಿ ಖುಷಿಯಾಯಿತು. ಜೊತೆಗೆ ತಪ್ಪುಗಳನ್ನು ತಿದ್ದಿಕೊಳ್ಳು ಇಂಗಿತ ವ್ಯಕ್ತಪಡಿಸಿದರು.

ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿಬಂದಿವೆ. ಮಗುಳುನಗೆ ಹಾಡು ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಹೊರಹಾಕಿದರು.

ಸಾಹಿತಿ ನಾಗೇಂದ್ರ ಪ್ರಸಾದ್, ಕಥೆ ಚೆನ್ನಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಜೆಸ್ಸಿಗಿಫ್ಟ್ ಸಂಗೀತ ಪೂರಕವಾಗಿದೆ. ಎಂದರೆ ಚಿತ್ರತಂಡ ಒಳ್ಳೆಯ ಪ್ರಯತ್ನ ಮಾಡಿದೆ ಅವರಿಗೆ ಯಶಸ್ಸು ಸಿಗಲಿ ಎಂದು ನಿರ್ಮಾಪಕ ಎನ್,ಎಂ ಸುರೇಶ್ ಆಶಿಸಿದರು.

Leave a Comment