ಪೂರಿ ಜೊತೆ ಮತ್ತೆ ಇಶಾನ್

ನಿರ್ಮಾಪಕ ಸಿ.ಆರ್. ಮನೋಹರ್ ಸಹೋದರ ಇಶಾನ್ ನಾಯಕರಾಗಿರುವ ‘ರೋಗ್ ಚಿತ್ರವೂ ಕನ್ನಡ ತೆಲುಗಿನಲ್ಲಿ ಯುಗಾದಿಗೆ ತೆರೆ ಕಾಣುತ್ತಿರುವ ಬೆನ್ನಲ್ಲೇ ಇಶಾನ್ ಜತೆ ನಿರ್ದೇಶಕ ಪೂರಿ ಜಗನ್ನಾಥ್ ಮತ್ತೊಂದು ಚಿತ್ರ ಮಾಡುವ ಸಿದ್ಧತೆ ನಡೆಸಿದ್ದಾರೆ.

ಅಪ್ಪು ಚಿತ್ರದ ಬಳಿಕ ‘ರೋಗ್ ನಿಂದ ಕನ್ನಡಕ್ಕೆ ಮರಳಿರುವ ನಿರ್ದೇಶಕ ಪೂರಿ ಜಗನ್ನಾಥ್‌ಗೆ ಇಶಾನ್ ಅಭಿನಯಶೈಲಿ ಇಷ್ಟವಾಗಿದ್ದು ಇಶಾನ್‌ನನ್ನು ಇಟ್ಟುಕೊಂಡು  ಎರಡನೇ ಚಿತ್ರ ನಿರ್ದೇಶನಕ್ಕೆ ಅವರು ಮುಂದಾಗಿದ್ದಾರೆ.

ಪೂರಿ ಸರ್ ಜತೆ ಮತ್ತೊಂದು ಸಿನಿಮಾ ಮಾಡುವ ಕುರಿತು ಮಾತುಕತೆ ಆಗಿರುವುದನ್ನು  ಒಪ್ಪಿಕೊಳ್ಳುವ ಇಶಾನ್, ‘ರೋಗ್ ಸಿನಿಮಾ ಮುಗಿದ ಮೇಲೆ ಪೂರಿ ಅವರು ‘ನನಗೆ ನೀನು ಇಷ್ಟವಾದೆ. ನನ್ನ ಹೋಮ್ ಬ್ಯಾನರ್‌ನಲ್ಲೇ ನಿನಗೊಂದು ಸಿನಿಮಾ ಮಾಡುತ್ತೇನೆ’ ಎಂದಿದ್ದಾರೆ. ಅಂಥ ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡುವುದಕ್ಕೆ ತುಂಬ ಖುಷಿಯಾಗುತ್ತದೆ ಎಂದರು ಇಶಾನ್. ನಂದಮೂರಿ ಬಾಲಕೃಷ್ಣ ನಟನೆಯ ೧೦೧ನೇ ಚಿತ್ರಕ್ಕೆ ಪೂರಿ ನಿರ್ದೇಶನ ಮಾಡುತ್ತಿದ್ದಾರೆ.

ಅದು ಮುಗಿಯುತ್ತಿದ್ದಂತೆ ಇಶಾನ್ ಜತೆಗಿನ ಹೊಸ ಸಿನಿಮಾ ಆರಂಭಿಸುವ ಯೋಜನೆಯನ್ನು ರೂಪಿಸಲಾಗಿದೆ ಎರಡನೇ ಚಿತ್ರವನ್ನು ಕೂಡ ಕನ್ನಡ-ತೆಲುಗು ಭಾಷೆಗಳಲ್ಲಿ ನಿರ್ದೇಶನ ಮಾಡುವ ಯೋಜನೆಯನ್ನು ಪೂರಿ ಹಾಕಿಕೊಂಡಿದ್ದಾರೆ ಎನ್ನುತ್ತಾರೆ .

‘ರೋಗ್ ತೆರೆಕಾಣುವ ಮೊದಲೇ ಕೆಲ ನಿರ್ಮಾಪಕರು ಇಶಾನ್ ಜತೆ ಸಿನಿಮಾ ಮಾಡುವುದಕ್ಕೆ ಉತ್ಸಾಹ ತೋರಿದ್ದಾರೆ. ‘ಈಗಾಗಲೇ ಮೂರ್‍ನಾಲ್ಕು ಮಂದಿ ನಿರ್ಮಾಪಕರು-ನಿರ್ದೇಶಕರು ಅಣ್ಣನ ಜೊತೆ ಮಾತುಕತೆ ನಡೆಸಿರುವ ವಿವರವನ್ನು ಹಂಚಿಕೊಳ್ಳಲು ನಿಶಾನ್ ನಿರಾಕರಿಸಿದರು.

ತೆಲುಗು ಭಾಷೆಯಲ್ಲೂ ಅವಕಾಶಗಳು ಬರುತ್ತಿವೆ. ವೃತ್ತಿಜೀವನದ ಆರಂಭದಲ್ಲಿಯೇ ಇಂತಹ ಅವಕಾಶಗಳು ಸಿಗುತ್ತಿರುವುದು ಖುಷಿ ನೀಡಿದೆ ಎಂದರು ನಿಶಾನ್. ಅಂದಹಾಗೆ, ‘ರೋಗ್ ಚಿತ್ರದಲ್ಲಿ ಮನ್ನಾರಾ ಚೋಪ್ರಾ ಮತ್ತು ಏಂಜೆಲಾ ಕ್ರಿಸ್ಲಿಂಜ್ಕಿ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ‘ಸಿಂಗಂ ೩’ ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ಖಳನಾಗಿ ಕಾಣಿಸಿಕೊಂಡಿದ್ದಾರೆ.

Leave a Comment