ಪುಸ್ತಕ ಜ್ಞಾನ ಹೊಂದಲು ಕರೆ

ಹುಬ್ಬಳ್ಳಿ,ಆ.13- ವಿದ್ಯಾರ್ಥಿಗಳು ಅಂತರ್‍ಜಾಲಕ್ಕಿಂತ ಪುಸ್ತಕದಲ್ಲಿ ಹೆಚ್ಚು ಜ್ಞಾನ ಅಡಕವಾಕಿರುತ್ತದೆ, ಗ್ರಂಥಾಲಯಗಳನ್ನು ಸದುಪಯೋಗ ಪಡಿಸಕೊಳ್ಳಬೇಕು. ಇಂದಿಲ್ಲಿ ಹೇಳಿದರು.
ಕೆಎಲ್‍ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್ ಎಸ್ ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಚಾರ್ಯ ಡಾ.ಬಿ.ಆರ್.ಪಾಟೀಲ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸದಾ ಅಧ್ಯಯನಶೀಲತೆ ರೂಢಿಸಿಕೊಳ್ಳಬೇಕು.ಸಮಯದ ಸದುಪಯೋಗ ಮಾಡಿಕೊಂಡು ಗ್ರಂಥಾಲಯದಲ್ಲಿ ಹೆಚ್ಚು ಸಮಯವನ್ನು ಓದುವದರಲ್ಲಿ ಕಳೆದಾಗ ಜೀವನದಲ್ಲಿ ಯಶಸ್ಸು ಸಾಧಿಸುವದು ಖಂಡಿತ.ಸರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್‍ಸಿ,ಕೆಪಿಎಸ್‍ಸಿ ಮುಂತಾದ ಪರೀಕ್ಷೆಗಳಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳ ಅವಲೋಕನ,ಶಿಕ್ಷಕರು ಮತ್ತು ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳೊಂದಿಗೆ ಸಂವಹನ ಮತ್ತು ಬರವಣಿಗೆ ಶ್ಯೆಲಿಯನ್ನು ರೂಡಿಸಿಕೊಂಡಾಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಬಹುದೆಂದು ಉದಾಹರಣೆಗಳೊಂದಿಗೆ ವಿವರಿಸಿದರು.ವಿದ್ಯಾರ್ಥಿಗಳು ಗ್ರಂಥಗಳ ಮುನ್ನುಡಿಗಳನ್ನು ಓದಬೇಕು ಹಾಗೂ ಟಿಪ್ಪಣಿ ಮಾಡುವ ಸ್ವಭಾವ ಬೆಳೆಸಿಕೊಳ್ಳಬೇಕು. ಮೂಲಭೂತ ಮತ್ತು ಸಂದರ್ಭ ಗ್ರಂಥಗಳನ್ನು ಓದಬೇಕೆಂದರು. ಕುತೂಹಲ, ವಿವೇಚನೆ,ಗುರಿ,ಛಲ,ಪ್ರಯತ್ನ ಯಶಸ್ಸಿನ ಸೂತ್ರಗಳಾಗಿದ್ದು, ಅವುಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.
ಇನ್ನೂರ್ವ ಅತಿಥಿಗಳಾಗಿ ಆಗಮಿಸಿದ ಪದವಿ ಪೂರ್ವ ಪ್ರಾಚಾರ್ಯ ಪ್ರೊ.ಶ್ರೀಮತಿ ನಿರ್ಮಲಾ ಅಣ್ಣಿಗೇರಿ ಒಳ್ಳೆಯ ಗ್ರಂಥವನ್ನು ಓದುದವದರಿಂದ ಸುಂದರ ಬದಕು ನಿರ್ಮಾಣಗೊಳ್ಳುತ್ತದೆ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸನ್ನದ್ಧರಾಗಲು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.ನಿರಂತರವಾದ ಕಲಿಕೆ ಮತ್ತು ಆಸಕ್ತಿಯಿಂದ ವ್ಯೆವದ್ಯಮಯವಾದ ಓದಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಬಹುದೆಂದರು.ಶ್ರೀ ಸಂಗಮೇಶ ಸಣ್ಣಕ್ಕಿ,ಹಾಗೂ ವಿ.ಬಿ.ಬಬ್ಲಿ ಗ್ರಂಥಾಲಯ ಕುರಿತು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸದ ಕುರಿತು ಉದಾಹರಣೆಯೊಂದಿಗೆ ತಿಳಿಸಿದರು.
ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಯಾದ ಬಸವರಾಜ ಯಕ್ಕಣ್ಣವರ ಅವರಿಗೆ ಉತ್ತಮ ಓದುಗ ಪ್ರಶಸ್ತಿಯನ್ನು ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ತಮ್ಮ ಒಡನಾಟವನ್ನು ವಿದ್ಯಾರ್ಥಿಗಳ ಮುಂದೆ ವಿವರಿಸಿದರು.
ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ವಿ.ಜಿ.ರಜಪೂತ ಪ್ರಾಸ್ಥಾವಿಕವಾಗಿ ಮಾತನಾಡಿದರು.ಡಾ.ವಾಯ್.ಎನ್.ನಾಗೇಶ,ಪ್ರೊ.ಆರತಿ ಪಿ.ಎಂ.ಪ್ರೊ.ವಿ.ಬಿ.ಕಲ್ಯಾಣಿ,ಪ್ರೊ.ಗಿರೀಶ ಚೌಡಪ್ಪನವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಮ್ಯಾ ಕುರ್ತಕೋಟಿ ಪ್ರಾರ್ಥಿಸಿದರು. ಮೇಘನಾ ಪಾಟೀಲ ಸ್ವಾಗತಿಸಿದರು.ಸಹಾಯಕ ಗ್ರಂಥಪಾಲಕ ವಿ.ಬಿ.ಬಬ್ಲಿ ಅತಿಥಿಗಳನ್ನು ಪರಿಚಯಿಸಿ, ಗ್ರಂಥಾಲಯದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಜೀವನ ಸಾಧನೆಗಳ ಕುರಿತು ವಿವರಿಸಿದರು.. ನಿತೀಶ ಡಂಬಳ ವಂದಿಸಿದರು. ಅನುಷಾ ಕಲಾಲ ಕಾರ್ಯಕ್ರಮ ನಿರೂಪಿಸಿದರು.

Leave a Comment