ಪುರಾಣ ಕಾರ್ಯಕ್ರಮ

ಅಳ್ನಾವರ,ಆ12- ಇಂದಿರಾ ನಗರ ಬಡಾವಣೆಯ ವೀರದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ವೀರಭದ್ರ ಜೀವನ ಚರಿತ್ರೆಯ ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾದ ಹಂಪ ಸಾಗರದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಎಸ್.ಡಿ. ದೇಗಾವಿಮಠ, ಬಸಯ್ಯ ಹಿರೇಮಠ , ವೀರಭದ್ರಗೌಡ ಪಾಟೀಲ ಮತ್ತಿತರು ಇದ್ದರು.
ವೀರಭದ್ರರರ ಪುರಾಣ ವಾಚನವನ್ನು ಶ್ರದ್ದೆಯಿಂದ ಶ್ರವಣ ಮಾಡಿ
ಅಳ್ನಾವರ: ಮಹಾತ್ಮರ ಜೀವನ ಚರಿತ್ರೆಯಲ್ಲಿ  ಪ್ರೀತಿ, ವಾತ್ಸಲ್ಯ, ಮಮಕಾರ ಗುಣಗಳ ಅಳವಡಿಕೆ ಇರುತ್ತದೆ. ವೀರಭದ್ರರ ಜೀವನದ ಅಧ್ಯಯನದ ಶ್ರವಣವನ್ನು ಶ್ರದ್ದೆಯಿಂದ ಮಾಡಬೇಕು. ಮನದಲ್ಲಿ ಭಕ್ತಿಯನ್ನು ತುಂಬಿಕೊಂಡು ಸತ್ಸಂಗ ಕಾರ್ಯದಲ್ಲಿ ಬಾಗಿಯಾದಾಗ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಪಡೆದುಕೊಳ್ಳಲು ಸಾಧ್ಯವಾದಿತು ಎಂದು ಹಂಪ ಸಾಗರದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಿರಿಯ ಆಧ್ಯಾತ್ಮ ಜೀವಿ ಎಸ್.ಡಿ .ದೇಗಾವಿಮಠ ನಡೆಸುತ್ತಿರುವ ವೀರಭದ್ರ ಜೀವನ ಚರಿತ್ರೆ ಪುರಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ  ಆಶೀರ್ವಚನ ನೀಡಿದ ಶ್ರೀಗಳು ,ಧರ್ಮದ ಪರಿಪಾಲನೆಯನ್ನು ಕಡ್ಡಾಯವಾಗಿ ನಿಬಾಯಿಸಬೇಕು. ಮಾನವ ಬದುಕು ಸಮಾಜಕ್ಕೆ ಸಂದೇಹ ಪಡದ ಹಾಗೆ ಇರದೆ ಸಂದೇಶ ನೀಡುವ ಹಾಗೆ ಇರಬೇಕು ಎಂದರು.
ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಹಬ್ಬಗಳು ಧಾರ್ಮಿಕ ಹಾಗೂ ವೈಜ್ಞಾನಿಕ ಹಿನ್ನಲೆಯಲ್ಲಿ ಆಚರಣೆಯಲ್ಲಿವೆ. ದೀಪಾವಳಿ, ನವರಾತ್ರಿ ,ಮನ್ನೆತ್ತಿನ ಅಮವಾಸ್ಯೆ ಹಾಗೂ ಶ್ರಾವಣ ಮಾಸದ ಕಾರ್ಯಕ್ರಮಗಳ ಮಹತ್ವನ್ನು ಏಳೆ ಏಳೆಯಾಗಿ ಬಿಡಿಸಿಟ್ಟ ಶ್ರೀಗಳು ಇಂತಹ ಆಚರಣೆಗಳಲ್ಲಿ ಶ್ರದ್ದೆಯಿಂದ ಬಾಗಿಯಾಗಿ ಸನಾತನ ಧರ್ಮ ಪರಂಪರೆಯನ್ನು ಉಳಿಸಬೇಕು, ಇಂತಹ ಧರ್ಮಾಚರಣೆಯಲ್ಲಿ ಭಾತೃತ್ವ, ಪ್ರೀತಿ, ವಿಶ್ವಾಸದ ಬಾವಗಳು ಅಡಕವಾಗಿವೆ. ನಮ್ಮ ಭವ್ಯ ಸಂಸ್ಕøತಿ, ಪರಂಪರೆ ಹಾಗೂ ಸಂಸ್ಕಾರದ ಮೌಲ್ಯಗಳು ಉತ್ತಮ ಸಮಾಜದ ಮನಸ್ಸನ್ನು ಸೃಷ್ಟಿಸಲಿ, ಅಧ್ಯಾತ್ಮ ಜ್ಞಾನದ ಬೆಳಕಿನಿಂದ ಸಾಮರಸ್ಯದ ಬದುಕು ಕಟ್ಟಿಕೊಂಡು ಮುಂದಿನ ಪೀಳಿಗೆಗೆ ಮೌಲ್ಯಯುತ ಸಮಾಜ ಕಟ್ಟಿಕೊಡಲು ಮುಂದಾಗಿ ಎಂದರು
ಹಿರಿಯ ಆಧ್ಯಾತ್ಮ ಜೀವಿ ಎಸ್.ಡಿ. ದೇಗಾವಿಮಠ ಸತತ 18 ದಿನಗಳ ಕಾಲ ದಿನ ನಿತ್ಯ ಸಂಜೆ ವೀರಭದ್ರ ಜೀವನ ಚರಿತ್ರೆಯ ಪುರಾಣ ಕಥನ ವಾಚನ ಮಾಡುತ್ತಿದ್ದಾರೆ.ದೇವಸ್ಥಾನಕ್ಕೆ ಪ್ರಥಮ ಬಾರಿ ಆಗಮಿಸಿದ ಶ್ರೀಗಳನ್ನು ಪಾದ ಪೂಜೆ ನೇರವೇರಿಸಿ, ಆರತಿ ಮಾಡಿ ಭಕ್ತಿಪೂರ್ವಕವಾಗಿ ಭರಮಾಡಿಕೊಳ್ಳಲಾಯಿತು. ನಂತರ ಶ್ರೀಗಳನ್ನು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸತ್ಕರಿಸಲಾಯಿತು.
ದೇವಸ್ಥಾನ ಕಮೀಟಿಯ ಅಧ್ಯಕ್ಷ ಬಸಯ್ಯ ಹಿರೇಮಠ, ವೀರಭದ್ರಗೌಡ ಪಾಟೀಲ, ಐ.ಸಿ. ಹಸಬಿಮಠ, ಪೂರ್ಣಿಮಾ ಮುತ್ನಾಳ, ರಾಜೇಶ್ವರಿ ಪಾಟೀಲ, ಅನ್ನಪೂರ್ಣ ಹಿರೇಮಠ, ಜಯಶ್ರೀ ಸೊಪ್ಪಿ, ಶಾಂತವ್ವ ಪಿರೋಜಿ, ಚೆನ್ನಬಸಪ್ಪ ನರಗುಂದ, ಆನಂದ ಮತ್ತಿಕಟ್ಟಿ, ರಾಂದೇವಾಡಿ, ಬೊಂಗಾಳೆ, ಬಾಳೆಕುಂದ್ರಿ, ಕಾಡದೇವರಮಠ ಮತ್ತಿತರು ಇದ್ದರು.
ಆರಂಭದಲ್ಲಿ ಪೂರ್ಣಮಾ ಮುತ್ನಾಳ ಸಂಗಡಿಗರು ಭಕ್ತಿ ಗೀತೆ ಹಾಡಿದರು.  ಸುಕನ್ಯಾ ಗಡವೀರ ಸಂಗಡಿಗರು ಪಾರ್ಥನಾ ಗೀತೆ ಹಾಡಿದರು.

Leave a Comment