ಪುರಸಭೆ ಚುನಾವಣೆ: ಕಣದಲ್ಲಿ 68 ಅಭ್ಯರ್ಥಿಗಳು

ಮಧುಗಿರಿ, ಆ. ೨೫- ತಾಲ್ಲೂಕಿನ ಪುರಸಭೆಯ 23 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 80 ಅಭ್ಯರ್ಥಿಗಳ ಪೈಕಿ 12 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 68 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

1ನೇ ವಾರ್ಡ್‌ಗೆ ಮುಬಷೀರಾಬಾನು (ಕಾಂಗ್ರೆಸ್), ಶಕೀಲಾಬಾನು (ಜಾತ್ಯತೀತ ಜನತಾದಳ), ಅಸ್ಮತ್‌ಉನ್ನೀಸಾಷರೀಫ್ ಮತ್ತು ಅಸೀಯಾಬಾನು (ಪಕ್ಷೇತರ),
2ನೇ ವಾರ್ಡ್‌ಗೆ ಎಂ.ವಿ. ಗೋವಿಂದರಾಜು (ಕಾಂಗ್ರೆಸ್), ಸುಬ್ರಮಣ್ಯ (ಕೇಬಲ್ ಸುಬ್ಬು) (ಜೆಡಿಎಸ್), ಟಿ.ಹೆಚ್. ದಿಲೀಪ್‌ಕುಮಾರ್ ಮತ್ತು ಹನುಮಂತರಾಯಪ್ಪ(ಪ),
3ನೇ ವಾರ್ಡ್‌ಗೆ ನಸೀಮಬಾನು(ಕಾಂಗ್ರೆಸ್), ರುಕಿಯಾಬಿ ಶಫಿಕ್(ಜೆಡಿಎಸ್), ಹಸೀನಾಬೇಗಂ(ಬಿಜೆಪಿ), ಜಯಮ್ಮ(ಪ), 4ನೇ ವಾರ್ಡ್‌ಗೆ ಆರ್.ಡಿ. ಅಭಿಷೇಕ್ ಜೈನ್(ಬಿಜೆಪಿ), ಅಲಿಮುಲ್ಲಾ(ಕಾಂಗ್ರೆಸ್), ಸೈಯದ್ ಕರೀಂ(ಜೆಡಿಎಸ್), ಅಬ್ದುಲ್ ಲತೀಫ್ ಪಾಷ(ಶಾಹು) (ಪ) ಕಣದಲ್ಲಿದ್ದಾರೆ.
5ನೇ ವಾರ್ಡ್‌ನಿಂದ ಎಂ.ಎಲ್. ಗಂಗರಾಜು(ಜೆಡಿಎಸ್), ಎಸ್. ದಯಾನಂದ(ಕಾಂಗ್ರೆಸ್), ಬಿ. ಹಿತೇಶ್(ಬಿಜೆಪಿ), 6ನೇ ವಾರ್ಡ್‌ಗೆ ಚಿಕ್ಕಣ್ಣ (ಜೆಡಿಎಸ್), ಸಿ. ನಟರಾಜು(ಕಾಂಗ್ರೆಸ್), 7ನೇ ವಾರ್ಡ್‌ಗೆ ಪುಟ್ಟಮ್ಮ(ಕಾಂಗ್ರೆಸ್), ಭವಾನಿ (ಜೆಡಿಎಸ್), 8ನೇ ವಾರ್ಡ್‌ ಪಾರ್ವತಮ್ಮ(ಜೆಡಿಎಸ್), ಯಶೋಧ ಅಂಜಿನಪ್ಪ(ಕಾಂಗ್ರೆಸ್), 9ನೇ ವಾರ್ಡ್‌ಗೆ ಎಮ್.ಈ. ಕರಿಯಣ್ಣ(ಕಾಂಗ್ರೆಸ್), ಎಂ.ವಿ. ಮಂಜುನಾಥ(ಜೆಡಿಎಸ್), ಎಲ್. ರವಿಕಿರಣ್(ಬಿಜೆಪಿ) ಎಸ್. ಶಂಕರಲಿಂಗ(ಪ), 10ನೇ ವಾರ್ಡ್‌ಗೆ ಗಿರಿಜಾ (ಕಾಂಗ್ರೆಸ್), ಸುಜಾತ.ಪಿ.ಭಾಸ್ಕರ್(ಜೆಡಿಎಸ್), 11ನೇ ವಾರ್ಡ್‌ ಷಾಹೀನಾಕೌಸರ್‍ಶಕೀಲ್(ಕಾಂಗ್ರೆಸ್), ಎನ್.ಟಿ. ಸಿದ್ದಲಕ್ಷ್ಮಮ್ಮ(ಜೆಡಿಎಸ್), ಫೈರೋಜ್ ಖಾನಂ(ಪ), 12ನೇ ವಾರ್ಡ್‌ಗೆ ಜಿ.ಎನ್. ಶೋಭಾರಾಣಿ(ಕಾಂಗ್ರೆಸ್), ಸಲೀಂಉನ್ನಿಸಾಅಲ್ತಾಫ್ (ಜೆಡಿಎಸ್), 13ನೇ ವಾರ್ಡ್‌ಗೆ ನರಸಿಂಹಮೂರ್ತಿ(ಜೆಡಿಎಸ್), ಪಿ.ಆರ್. ಶ್ರೀರಂಗರಾಜು(ಕಾಂಗ್ರೆಸ್), 14ನೇ ವಾರ್ಡ್‌ಗೆ ಎನ್.ಬಿ. ಗಾಯತ್ರಿ(ಕಾಂಗ್ರೆಸ್), ರಾಧ (ಜೆಡಿಎಸ್) ಕಣದಲ್ಲಿ ಉಳಿದಿದ್ದಾರೆ.

15ನೇ ವಾರ್ಡ್‌ನಿಂದ ಕೆ. ನಾರಾಯಣ್(ಜೆಡಿಎಸ್), ಕೆ. ಪ್ರಕಾಶ (ಕಾಂಗ್ರೆಸ್), ಎಂ. ರಾಜೇಶ್ (ಬಿಜೆಪಿ), ಎಂ.ಎಸ್. ಬದರಿನಾಥ್ (ಪ), 16ನೇ ವಾರ್ಡ್‌ಗೆ ಎಂ.ಆರ್. ಜಗನ್ನಾಥ್(ಎಂ.ಆರ್.ಜೆ) (ಜೆಡಿಎಸ್), ಎಂ.ಈ. ದೀಕ್ಷಿತ್(ಬಿಜೆಪಿ), ವೆಂಕಟೇಶ್ ಎಸ್.ಡಿ.ಕೃಷ್ಣಪ್ಪ(ಕಾಂಗ್ರೆಸ್), 17ನೇ ವಾರ್ಡ್‌ಗೆ ಎಂ.ಎಸ್. ಚಂದ್ರಶೇಖರ್(ಕಾಂಗ್ರೆಸ್), ಎಂ.ವಿ. ಬಾಲಾಜಿಬಾಬು( ಜೆಡಿಎಸ್), ಮಂಜುನಾಥ(ಬಿಜೆಪಿ), ಎಂ.ಎಸ್. ರಾಘವೇಂದ್ರ(ಪ), 18ನೇ ವಾರ್ಡ್‌ಗೆ ನಾಗಲತಾ ಲೋಕೇಶ್ (ಕಾಂಗ್ರೆಸ್), ಪ್ರೇಮ(ಜೆಡಿಎಸ್), 19ನೇ ವಾರ್ಡ್‌ಗೆ ಚಂದ್ರಶೇಖರ್ (ಬಾಬು) (ಜೆಡಿಎಸ್), ನರಸಿಂಹಮೂರ್ತಿ(ಕಾಂಗ್ರೆಸ್),ಆರ್. ಭರತೇಶ್ (ಬಿಜೆಪಿ), ಸಿ. ರಾಜು (ಪ), 20ನೇ ವಾರ್ಡ್‌ಗೆ ಇಂದ್ರಮ್ಮ(ಜೆಡಿಎಸ್), ಕೆ.ಎ. ರಾಧಿಕಾ ಆನಂದಕೃಷ್ಣ(ಕಾಂಗ್ರೆಸ್),21 ನೇ ವಾರ್ಡ್‌ಗೆ ತಿಮ್ಮರಾಜು (ಜೆಡಿಎಸ್), ಎಂ.ಎನ್. ಮಾರುತಿ (ಕಾಂಗ್ರೆಸ್), 22ನೇ ವಾರ್ಡ್‌ಗೆ ಲಲಿತಾ (ಜೆಡಿಎಸ್), ಜಿ.ಆರ್. ಸುಜಾತ (ಕಾಂಗ್ರೆಸ್), ಸಾವಿತ್ರಮ್ಮ (ಪ), 23ನೇ ವಾರ್ಡ್‌ಗೆ ಪಿ.ಎಲ್. ನರಸಿಂಹಮೂರ್ತಿ(ಬಿಜೆಪಿ), ಜಿ.ಎ. ಮಂಜುನಾಥ(ಜೆಡಿಎಸ್), ಲಕ್ಷ್ಮೀನಾರಾಯಣ(ಕಾಂಗ್ರೆಸ್), ಶ್ರೀಹರಿಗಣೇಶ್ (ಬಿ.ಎಸ್.ಪಿ) ಕಣದಲ್ಲಿ ಉಳಿದಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ 23 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 9 ಕ್ಷೇತ್ರಗಳಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಬಿ.ಎಸ್.ಪಿ ಮತ್ತು 12 ಕ್ಷೇತ್ರಗಳಲ್ಲಿ ಪಕ್ಷೇತರರು ಸ್ಪರ್ಧಿಸಿದ್ದಾರೆ.

Leave a Comment