ಪುನರೂರುಗೆ ’ಯಕ್ಷಾಂಗಣ’ದ ಅಭಿನಂದನೆ

ಮಂಗಳೂರು, ಸೆ.೯- ಕದ್ರಿ ನೃತ್ಯ ಭಾರತಿ ವತಿಯಿಂದ ಮಂಗಳೂರು ಪುರಭವನದಲ್ಲಿ ಇತ್ತೀಚೆಗೆ ಜರಗಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ೭೫ ರ ಸಂಭ್ರಮ ’ಹರಿ ನಮನ’ ಸಮಾರಂಭದಲ್ಲಿ ಯಕ್ಷಾಂಗಣ ಮಂಗಳೂರು ಮತ್ತು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪರವಾಗಿ ಅವರನ್ನು ಅಭಿನಂದಿಸಲಾಯ್ತು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪುನರೂರು ಅವರಿಗೆ ಶಾಲು, ಹೂಹಾರ ಅರ್ಪಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಯಕ್ಷಾಂಗಣದ ಉಪಾಧ್ಯಕ್ಷ ಎ.ಶಿವಾನಂದ ಕರ್ಕೇರ, ಜತೆ ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸದಸ್ಯರಾದ ಬೆಟ್ಟಂಪಾಡಿ ಸುಂದರ ಶೆಟ್ಟಿ, ಕೃಷ್ಣಪ್ಪ ಗೌಡ ಪಡ್ಡಂಬೈಲ್ ಹಾಗೂ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment