ಪುದುಚೆರಿಯಲ್ಲಿ ಸಂಚಾರಿ ಪಾಠ ಮಾಡಿದ ಕಿರಣ್ ಬೇಡಿ

ಪುದುಚೆರಿ, ಫೆ ೧೨- ದೇಶದ ಪ್ರಥಮ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ಥುತ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಿರಣ್ ಬೇಡಿ ಪುದುಚೆರಿಯಲ್ಲಿ ಸ್ವತಃ ರಸ್ತೆಗಿಳಿದು ಸಂಚಾರಿ ನಿಯಮ ಪಾಲಿಸುವಂತೆ ಸವಾರರಿಗೆ ಬೆಂಡು ಎತ್ತುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುದುಚೆರಿಯ ರಸ್ತೆಗಳಲ್ಲಿ ಪೊಲೀಸರ ಸಹಾಯದೊಂದಿಗೆ ಹೆಲ್ಮೆಟ್ ಧರಸದವರಿಗೆ, ಓವರ್ ಲೋಡ್ ಆಗಿರುವ ಆಟೋ ಮತ್ತು ತ್ರಿಪಲ್ ರೈಡಿಂಗ್ ಮಾಡುತ್ತಿರುವವರನ್ನು ತಡೆದು ಟ್ರಾಫಿಕ್ ರೂಲ್ಸ್ ಫಾಲೋ ಮಾಡಿ ಎಂಬ ಅಭಿಯಾನವನ್ನು ಶುರು ಮಾಡಲಾಗಿದೆ. ಈ ವಿಡಿಯೋನಲ್ಲಿ ಗಮನಿಸಿದ್ದೆ ಆದರೆ ಇಲ್ಲಿ ಹಲವರು ಹೆಲ್ಮೆಟ್ ಧರಿಸದೆಯೆ ವಾಹನ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.

ಇಷ್ಟೆ ಅಲ್ಲದೇ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದ ಯುವಕ, ಯುವತಿಯತು ಮತ್ತು ಓವರ್ ಲೋಡ್ ಆಗಿ ಸಂಚರಿಸುವುದನ್ನು ಕಾಣಬಹುದು. ಟ್ರಾಫಿಕ್ ಪೊಲೀಸರು ಮತ್ತು ಕೆಲ ಸೆಲಬ್ರಿಟಿಗಳು ಮಾತ್ರ ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ನಿರತರಾಗಿರುತ್ತಾರೆ. ಇದೀಗ ಕಿರಣ್ ಬೇಡಿಯವರು ಕೂಡಾ ಇಂತಹ ಒಳ್ಳೆಯ ಕಾರ್ಯಕ್ಕೆ ಮುಂದಾಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಮಾರು ದಿನಗಳ ಹಿಂದೆ ಪುಣೆಯಲ್ಲಿ ನಾವು ಹೆಲ್ಮೆಟ್ ಧರಿಸುವುದಿಲ್ಲ ಮತ್ತು ಶೇಕಡ ೨೦ ರಷ್ಟು ಸ್ಪೀಡ್‌ನಲ್ಲಿ ಚಲಿಸುತ್ತಿರುವ ನಮಗೆ ಹೆಲ್ಮೆಟ್‌ನ ಅವಶ್ಯಕತೆ ಇಲ್ಲವೆಂದು ಪುಣೆ ನಗರದ ನಾಗರೀಕರು ಮತ್ತು ರಾಜಕೀಯ ಅಭ್ಯರ್ತಿಗಳು ಪ್ರತಿಭಟನೆ ನಡೆಸಿದರು. ಇದನ್ನು ಗಮನಿಸಿದ ಕಿರಣ್‌ಬೇಡಿ ಅವರು ಸ್ವತಃ ರಸ್ತೆಗಿಳಿದು ಸವಾರರನ್ನು ತರಾಟೆ ತೆಗೆದುಕೊಂಡರು, ಅಲ್ಲದೇ ಸಂಚಾರಿ ನಿಯಮ ಪಾಲಿಸಿ ಎಂದು ಜಾಗೃತಿ ಮೂಡಿಸಿದರು.

Leave a Comment