ಪುತ್ರಿಯ ಯೋಗಕ್ಷೇಮಕ್ಕೆ 12 ಮಂದಿ ನೇಮಿಸಿದ ಕೋಟ್ಯಾಧಿಪತಿ

ಲಂಡನ್, ಸೆ. ೧೨: ಈ ತಿಂಗಳು ಲಂಡನ್‌ನ ಸ್ಕಾಟ್ ಲ್ಯಾಂಡ್‌ನಲ್ಲಿರುವ ಸೈಂಟ್ ಆಂಡ್ರೂಸ್ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಆರಂಭಿಸುತ್ತಿರುವ ತನ್ನ ಪುತ್ರಿಯ ಸಂರಕ್ಷಣೆಗಾಗಿ 4 ವರ್ಷ ಅವಧಿಗೆ ಆಕೆಯನ್ನು ನೋಡಿಕೊಳ್ಳಲು ಇಲ್ಲಿನ ಶ್ರೀಮಂತ ಭಾರತೀಯನೊಬ್ಬ 12 ಸೇವಕರು ಬೇಕೆಂದು ಜಾಹೀರಾತು ನೀಡಿದ್ದಾನೆ!

ಬ್ರಿಟನ್‌ನಲ್ಲಿ ಖಾಸಗಿ ವಲಯಕ್ಕೆ ಬೇಕಾದ ಸಿಬ್ಬಂದಿ ಹುಡುಕಿಕೊಡುವುದರಲ್ಲಿ ಪರಿಣತಿ ಪಡೆದಿರುವ ‘ಸಿಲ್ವರ್ ಸ್ವಾನ್ ರಿಕ್ರೂಟ್‌ಮೆಂಟ್ ಸಂಸ್ಥೆ’ಯು ಈ ಜಾಹಿರಾತು ಪ್ರಕಟಿಸಿದ್ದು, ‘ಭಾರತೀಯ ಶ್ರೀಮಂತ ಕುಟುಂಬವೊಂದಕ್ಕೆ ಅವರ ಪುತ್ರಿಯನ್ನು ನೋಡಿಕೊಳ್ಳಲು ಓರ್ವ ಬಾಣಸಿಗ, ತೋಟಗಾರ, ಮೂವರು ಮನೆ ಕೆಲಸದಾಳುಗಳು, ಓರ್ವ ಗೃಹ ವ್ಯವಸ್ಥಾಪಕ, ಓರ್ವ ಮಹಿಳಾ ಕೆಲಸದಾಳು, ಪಾಕ ತಜ್ಞರು, ಅಡುಗೆ ತಯಾರಕ, ಮೂವರು ಸೇವಕರು ಬೇಕಾಗಿದ್ದಾರೆ. ಎಲ್ಲರೂ ಸ್ಥಳೀಯ ನಿವಾಸಿಗಳಾಗಿರಬೇಕು’ ಎಂದು ಪ್ರಕಟಣೆ ನೀಡಿದೆ.

Leave a Comment