ಪುತ್ರಿಗಾಗಿ ‘ಮಿಶನ್ ಮಂಗಲ್’ ಚಿತ್ರದಲ್ಲಿ ನಟಿಸುತ್ತಿರುವ ಅಕ್ಷಯ್!

ಮುಂಬಯಿ, ಜುಲೈ 5 – ತಮ್ಮ ಮಗಳು ನಿತಾರಾಗಾಗಿ ‘ಮಿಶನ್ ಮಂಗಲ್’ ಚಿತ್ರದಲ್ಲಿ ಅಭಿನಯಿಸುತ್ತಿರುವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.

ಸಾಮಾಜಿಕ ತಾಣವೊಂದರಲ್ಲಿ ಅಕ್ಷಯ್, ”ಮೊದಲಿನಿಂದಲೂ ನಾನು ಮುಂಬರುವ ಯುವ ಪೀಳಿಗೆಯ ಕಲ್ಪನೆ ಹಾಗೂ ಕುತೂಹಲಕ್ಕೆ ಕಾರಣವಾಗಿರುವ ಚಿತ್ರದಲ್ಲಿ ನಟಿಸುವ ಹಂಬಲವಿತ್ತು. ಮಿಶನ್ ಮಂಗಲ್ ಅದೇ ತರಹದ ಚಿತ್ರವಿದೆ. ಪ್ರೇಕ್ಷಕರನ್ನು ಪ್ರೇರೆಪಿಸುವುದಲ್ಲದೇ, ಮನೋರಂಜನೆಯೂ ನೀಡಲಿದೆ. ಇದೊಂದು ಸತ್ಯ ಘಟನಾಧಾರಿತ ಚಿತ್ರ” ಎಂದು ಬರೆದುಕೊಂಡಿದ್ದಾರೆ.

‘ಮಿಶನ್ ಮಂಗಲ್’ ಚಿತ್ರದಲ್ಲಿ ಅಕ್ಷಯ್ ಹೊರತಾಗಿ ನಟಿಯರಾದ ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್ ಹಾಗೂ ನಟರಾದ ಕಾರ್ತಿಕ್ ಕುಲ್ಹಾರಿ ಮತ್ತು ಶರ್ಮನ್ ಜೋಶಿ ಮುಖ್ಯ ಪಾತ್ರದಲ್ಲಿದ್ದಾರೆ.

ಜಗನ್ ಶಕ್ತಿ ನಿರ್ದೇಶಿಸುತ್ತಿರುವ ಈ ಚಿತ್ರವು ಆಗಸ್ಟ್ 15ರಂದು ತೆರೆಗೆ ಬರಲಿದೆ.

Leave a Comment