ಪುಟಿನ್ ಸಾಹೇಬರ ಜಿಂಕೆ ಬ್ಲಡ್ ಬಾತ್

ಜಿಂಕೆಯ ಕೊಂಬಿನಿಂದ ತೆಗೆದ ರಕ್ತದಿಂದ ಸ್ನಾನ ಮಾಡಿದರೆ ಎಂಥವರು ಹದಿಹರೆಯದ ಯುವಕರನ್ನು ನಾಚಿಸುತ್ತಾರೆ. ಇದಕ್ಕೆ ಪಕ್ಕಾ ಉದಾಹರಣೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್.
ಪುಟಿನ್‌ಗೆ ಈಗ 64 ವರ್ಷ. ಆದರೆ ಈಗಲೂ 18ರ ಯುವಕರನ್ನು ನಾಚಿಸುವ ಅದ್ಬುತ ಮೈಕಟ್ಟು ಅವರಿಗಿದೆ. ಅವರು ಆಗಾಗ್ಗೆ ಜಿಂಕೆಯ ಕೊಂಬಿನಿಂದ ತೆಗೆದ ರಕ್ತದಿಂದ ಮಾಡುವ ಸ್ನಾನವೇ ಕಾರಣ.
ಜಿಂಕೆಯ ಕೊಂಬಿನಿಂದ ತೆಗೆದ ರಕ್ತದಿಂದ ಆಗಾಗ್ಗೆ ಸ್ನಾನ ಮಾಡಿದರೆ ಮೈಕಟ್ಟು ಸದೃಢವಾಗುತ್ತದೆ. ಯೌವನ ಮರುಕಳಿಸುತ್ತದೆ ಎಂಬುದು ರಷ್ಯನ್ನರ ನಂಬಿಕೆ.
ಅಲ್ತಾಯ್ ಪರ್ವತ ಪ್ರದೇಶದಲ್ಲಿ ರಕ್ತ ಸ್ನಾನ ರಾಮಬಾಣವಿದ್ದಂತೆ ಎಂದು ಅಲ್ಲಿನ ವೈದ್ಯರು ಹೇಳುತ್ತಾರೆ.
ಜಿಂಕೆಯ ಕೊಂಬಿನಿಂದ ತೆಗೆಯುವ ರಕ್ತದಿಂದ ಸ್ನಾನ ಮಾಡಿದರೆ ಮೂಳೆ, ಖಂಡ, ಸೊಂಟ, ಕೀಲುಗಳು ಬಲಿಷ್ಠವಾಗುತ್ತದೆ. ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ಕಣ್ಣಿನ ದೃಷ್ಟಿ, ಕೇಳುವ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ರಷ್ಯನ್ನರು ಈಗಲೂ ನಂಬುತ್ತಾರೆ.
ಹದಿಹರೆಯದವರಂತೆ ಕಾಣುವ ಪುಟೀನ್ ಆಗಾಗ್ಗೆ ಅಲ್ತಾಯ್ ಪ್ರದೇಶಕ್ಕೆ ಹೋಗುತ್ತಲೇ ಇರುತ್ತಾರೆ. ಅಲ್ಲಿನ ಕ್ಲಿನಿಕ್‌ನ ಸಹಾಯಕರು ಅಲ್ತಾಯ್ ಪರ್ವತ ಪ್ರದೇಶದಲ್ಲಿ ಆರೋಗ್ಯಕರ ಜಿಂಕೆಯನ್ನು ಹಿಡಿದು ಅದರ ಕೊಂಬಿನಿಂದ ರಕ್ತ ತೆಗೆದು ಪುಟಿನ್ ರಕ್ತಸ್ನಾನ ಮಾಡಿಸುತ್ತಾರೆ ಎಂದು ಈಚೆಗಷ್ಟೆ ರಷ್ಯಾದ ರಿಪಬ್ಲಿಕನ್ ಪತ್ರಿಕೆ ವರದಿ ಮಾಡಿದೆ.
ಪುಟಿನ್‌ಗೆ ರಕ್ತಸ್ನಾನದ ಬಗ್ಗೆ ಗೊತ್ತಿರಲಿಲ್ಲವಂತೆ. ಆಗಿನ ಪ್ರಧಾನಿ ಡಿಮಿಟ್ರಿ ಅವರಿಂದ ರಕ್ತಸ್ನಾನ ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಪಡೆದುಕೊಂಡು ರಕ್ತಸ್ನಾನ ಮಾಹಿತಿ ನಿರ್ಧರಿಸಿದರು.
ನಂತರದಲ್ಲಿ ಜಿಂಕೆ ರಕ್ತದ ತಜ್ಞ ಡಾ. ಅಲೆಗ್ಸಾಂಡರ್ ಅವರಿಂದ ರಕ್ತ ಸ್ನಾನದಿಂದ ಆಗುವ ಆರೋಗ್ಯ ಅಂಶಗಳ ಬಗ್ಗೆ ತಿಳಿದುಕೊಂಡು ಆಗಾಗ್ಗೆ ರಕ್ತಸ್ನಾನ ಮಾಡಲಾರಂಭಿಸಿದರಂತೆ!
ಮಾಜಿ ಪ್ರಧಾನಿ ಡಿಮಿಟ್ರಿ ಕೂಡ ಆಗಾಗ್ಗೆ ಜಿಂಕೆ ರಕ್ತದ ಸ್ನಾನ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು ಪ್ರಾಣ ಸಂಘಗಳ ಕಾರ್ಯಕರ್ತರ ತೀವ್ರ ವಿರೋಧ ಎದುರಿಸಬೇಕಾಯಿತಂತೆ.
ಇಟಲಿಯ ಪ್ರಧಾನಿ ಸಿಲ್ವಿನೋ ಬೆರ್ಲಿಸ್ಕ್ನೋನಿ ಪದೇ ಪದೇ ಜಿಂಕೆ ರಕ್ತಸ್ನಾನ ಮಾಡುತ್ತಿದ್ದರು. 70ನೇ ವಯಸ್ಸಿನಲ್ಲಿ ನಡೆಸಿದ ಶೃಂಗಾರ ಲೀಲೆಗಳು ಜಗಜಾಹೀರವಾಗಿದ್ದನ್ನು ಯಾರು ಮರೆಯುವಂತಿಲ್ಲ.
ಇದೀಗ ಪುಟಿನ್ ಸರದಿ. ಆಗಾಗ್ಗೆ ಜಿಂಕೆ ರಕ್ತಸ್ನಾನ ಮಾಡುತ್ತಾರೆ. ಹಾಗಾಗಿ ಅವರು ನೋಡಲು ಬಲಿಷ್ಠ ಸುಂದರಾಂಗನಂತೆ ಕಾಣುತ್ತಾರೆ ಎಂಬ ವದಂತಿಗಳು ರಷ್ಯಾದಲ್ಲೆಲ್ಲ ಹರಡಿದೆ.
ಅದೇನೆ ಇರಲಿ ಜಿಂಕೆಯ ಕೊಂಬಿನಿಂದ ಬಸಿದ ರಕ್ತಸ್ನಾನದಿಂದ ಸ್ನಾನ ಮಾಡಿದರೆ, ನ್ಯೂಮೋನಿಯಾ, ಆಸ್ತಮಾ, ಆಸ್ಟಿಯೋ ಪ್ಲೋರೊಸಿಸ್, ಬೆನ್ನು  ಮೂಳೆ ಸಮಸ್ಯೆಗಳು ಪರಿಹಾರವಾಗುತ್ತದೆ.

Leave a Comment