ಪುಟಾಣಿಗಳ ರ್‍ಯಾಂಪ್‌ವಾಕ್‌ಗೆ ವೇದಿಕೆ ಸಿದ್ಧತೆ

 350 ಮಕ್ಕಳ ಆಯ್ಕೆ

ಬೇಸಿಗೆ ರಜೆ ಮುಗಿಸಿ ಈಗತಾನೇ ಶಾಲೆಯತ್ತ ಪುಟಾಣಿಗಳಿಗೆ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ವತಿಯಿಂದ ಬೆಂಗಳೂರಿನಲ್ಲಿ ಮೊದಲ ಫ್ಯಾಷನ್ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ.

ದೇಶಾದ್ಯಂತ ನಡೆಯುವ ಈ ಆವೃತ್ತಿ ಜು ೧೪ ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಚೆನೈ, ಹೈದರಾಬಾದ್, ಕೋಲ್ಕತ್ತಾ, ದಿಲ್ಲಿ, ಚಂಡಿಗಢ, ಅಹಮದಾಬಾದ್, ಪುಣೆ, ಜೈಪೂರ್‌ಗಳಲ್ಲಿ ಹತ್ತು ದಿನಗಳವರೆಗೆ ನಡೆಯಲಿದೆ.
ಈ ಹತ್ತುದಿನಗಳ ಫ್ಯಾಷನ್ ಶೋನಲ್ಲಿ ಮಕ್ಕಳ ಉಡುಪು ತಯಾರಿಕಾ ಬ್ರಾಂಡ್ ಮತ್ತು ಡಿಸೈನರ್‌ಗಳು ಪಾಲ್ಗೊಳ್ಳಲಿದ್ದಾರೆ. ಮೊದಲ ಶೋ ಬೆಂಗಳೂರಿನ ಹೊಟೆಲ್ ಲಲಿತ್ ಅಶೋಕದಲ್ಲಿ ಜುಲೈ ೧೪ ರಂದು ನಡೆಯಲಿದೆ. ಬೆಂಗಳೂರು ಫ್ಯಾಷನ್ ಶೋಗೆ ೧೦೦೦ ಮಕ್ಕಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದು, ೩೫೦ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ವಿನೂತನ ಮಾದರಿಯ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್‌ನಲ್ಲಿ ಮಕ್ಕಳ ಉಡುಪು ತಯಾರಿಕಾ ಬ್ರಾಂಡ್ ಕಂಪನಿಗಳು ಹಾಗೂ ಡಿಸೈನರ್‌ಗಳಿಗೆ ತಮ್ಮ ಬ್ರಾಂಡ್ ಮತ್ತು ಡಿಸೈನ್‌ಗಳನ್ನು ೩ ರಿಂದ ೧೩ ವರ್ಷದೊಳಗಿನ ಮಕ್ಕಳು ರ?ಯಾಂಪ್ ಮೇಲೆ ಪ್ರದರ್ಶನ ಮಾಡಲು ಉತ್ತಮ ವೇದಿಕೆ ಇದಾಗಿದೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ಮಕ್ಳಳ ಪ್ರತಿಭೆಗಳನ್ನೂ ಅನಾವರಣಗೊಳಿಸಲಾಗುತ್ತಿದ್ದು, ಹಾಡು, ನೃತ್ಯ, ವಾದ್ಯ ನುಡಿಸುವುದು ಸೇರಿದಂತೆ ಅನೇಕ ಕಲೆಗಳನ್ನು ಪ್ರದರ್ಶಿಸಲಾಗುವುದು.
ಭಾರತೀಯ ಜೀವ ವಿಮಾ ಕಂಪನಿಯ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಯುರೇಕಾ ಫೋರ್ಬ್ಸ್, ಟೆಕ್ ಮಹಿಂದ್ರಾ, ಸೋಲ್‌ಫುಲ್, ಫೈರ್ ಫಾಕ್ಸ್, ಲ್ಯಾಕ್ಮೆ ಅಕಾಡೆಮಿ ಕಾರ್ಯಕ್ರಮದ ಪ್ರಾಯೋಜಕತ್ವ ಪಡೆದಿವೆ.
ಇಂಡಿಯ ಕಿಡ್ಸ್ ಫ್ಯಾಷನ್ ವೀಕ್ ಕುರಿತು ಕ್ರಾಪ್ಟ್ ವರ್ಲ್ಡ್ ಇವೆಂಟ್ ನಿರ್ದೇಶಕ ಮನೋಜ್ ಮೆಹತಾ ಮಾತನಾಡಿ, ಮಕ್ಕಳ ಉಡುಪುಗಳ ಬ್ರ್ಯಾಂಡ್ ಕಂಪನಿಗಳು ಮತ್ತು ಡಿಸೈನರ?ಸ್‌ಗಳು ತಮ್ಮ ನೈಪುಣ್ಯತೆಯನ್ನು ಈ ವೇದಿಕೆ ಮೂಲಕ ಪ್ರದರ್ಶನ ಮಾಡಲು ಒಳ್ಳೆಯ ಅವಕಾಶ. ಮಕ್ಕಳ ಉಡುಪು ಮಾರುಕಟ್ಟೆ ೬೬,೦೦೦ ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆ ಹೊಂದಲಾಗಿದೆ. ಅದು ಮುಂದಿನ ವರ್ಷಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ.
ಗ್ರಾಹಕರು ಹೆಚ್ಚು ಜಾಗೃತರಾಗಿರುವುದನ್ನು ಅರಿತಿರುವ ಅನೇಕ ಅಂತಾರಾಷ್ಟ್ರೀಯ ಆಟಗಾರರು, ಮಕ್ಕಳ ಉಡುಪು ತಯಾರಿಕಾ ಬ್ರ್ಯಾಂಡ್‌ಗಳ ಕ್ಷೇತ್ರದಲ್ಲಿ ಪ್ರವೇಶ ಪಡೆದಿದ್ದಾರೆ. ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್‌ನಲ್ಲಿ ದೇಶದ ಪ್ರಸಿದ್ದ ಬ್ರ್ಯಾಂಡ್ಸ್ ಮತ್ತು ಡಿಸೈನರಸ್‌ಗಳನ್ನು ಕರೆತರಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಕಿಡ್ಸ್ ಫ್ಯಾಷನ್ ಆವೃತ್ತಿಂiiಲ್ಲಿ ಸುಮಾರು ೮೦ ಕ್ಕೂ ಹೆಚ್ಚು ಬ್ರ್ಯಾಂಡ್ ಮತ್ತು ಡಿಸೈನರ?ಸ್‌ಗಳು ಪಾಲ್ಗೊಳ್ಳಲಿದ್ದಾರೆ. ಬೋಟಿಕ್, ವಸ್ತ್ರಾ ಕ್ರಿತಿ, ಕೃತಿ ಕುಟ್ಟಿ, ಗುಲ್ ಮೊಹರ್ ಕ್ರಿಯೇಷನ್, ನಿಶ್ಚಲಾ ರೆಡ್ಡಿ, ರೇನ್‌ಬೋ ಬರ್ಡ್ ಕೋಚರ್, ಸೋಹಮ್ ಕ್ರೀಯೇಷನ್ಸ್, ಮಿನಿ ಕ್ಲಬ್ ಮತ್ತು ಆಹಾಹಾ ಬ್ರ್ಯಾಂಡ್ ಕಂಪನಿಗಳು ಪಾಲ್ಗೊಳ್ಳಲಿವೆ.
ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ (ಐಕೆಎಫ್‌ಡಬ್ಲು) ಕ್ರಾಪ್ಟ್ ವರ್ಲ್ಡ ಮತ್ತು ಇವೆಂಟ್ ಕ್ಯಾಪಿಟಲ್ ಜಂಟಿಯಾಗಿ ಆಯೋಜಿಸಲಾಗುತ್ತಿದೆ. ಹಿಂದಿನ ಮೂರು ವರ್ಷಗಳ ಫ್ಯಾಷನ್ ಶೋಗಳಲ್ಲಿ ಬಾಲಿವುಡ್ ತಾರೆಯರಾದ ಕರೀಷ್ಮಾ ಕಪೂರ್, ಜೆನಿಲಿಯಾ ಡಿಸೋಜಾ, ಸುಷ್ಮಿತಾ ಸೇನ್, ದಿಯಾ ಮಿರ್ಜಾ, ಸೊಹೇಲ್ ಖಾನ್, ವಿವೇಕ್ ಒಬೇರಾಯ್, ನೀಲ್ ನಿತಿನ್ ಮುಖೇಶ್ ಮತ್ತು ಮಹಿಂದ್ರಾ ಬೇಡಿ ಪಾಲ್ಗೊಂಡು ಮಕ್ಕಳೊಂದಿಗೆ ರ?ಯಾಂಪ್ ಮೇಲೆ ಹೆಜ್ಜೆ ಹಾಕಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.
ಈ ವರ್ಷ ಬೆಂಗಳೂರು ಆವೃತ್ತಿಯಲ್ಲಿ ಮಿಸ್ ಇಂಡಿಯಾ ಗೆಲಾಕ್ಸಿ ಸುಜಾತಾ ಜಾನ್,ಮಿಸೆಸ್ ಸೌಥ್ ಇಂಡಿಯನ್ ಯುನಿವರ್ಸ್ ದುರ್ಗಾ ವೆಂಕಟೇಶ್, ದಕ್ಷಿಣ ಭಾರತದ ಚಿತ್ರ ನಟಿ ಕಾಮ್ನಾ ಜೆಟ್ಮಲಾನಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ www.ikfw.in

Leave a Comment