ಪಿರಿಯಡ್ಸ್ ತಡವಾಗುತ್ತಿದೆಯೇ?

ಮಹಿಳೆಯರಲ್ಲಿ ಕೆಲವರಿಗೆ ಪಿರಿಯಡ್ಸ್ ಪ್ರತಿ ತಿಂಗಳು ತಡವಾಗಿ ಆಗುತ್ತದೆ. ಇದಕ್ಕೆ ಕಾರಣಗಳು ಹಲವಾರು ಇವೆ. ಅವುಗಳನ್ನು ನೀವುತ ತಿಳಿದುಕೊಂಡು ಸರಿಯಾದ ಕ್ರಮ ರೂಢಿಸಿಕೊಂಡರೆ ಪಿರಿಯಡ್ಸ್ ಸರಿಯಾಗಿ ಆಗುತ್ತದೆ.
ಒತ್ತಡ ಹೆಚ್ಚಾದರೆ ಹಾರ್ಮೋನ್ ಸಮತೋಲನ ತಪ್ಪಿ ಕೆಲವೊಮ್ಮೆ ಪಿರಿಯಡ್ಸ್ ತಡವಾಗಿ ಆಗುತ್ತದೆ.
ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುವುದು ಸಹ ಪಿರಿಯಡ್ಸ್ ತಡವಾಗಲು ಕಾರಣವಾಗುತ್ತದೆ. ಇಂತಹ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರಲ್ಲಿ ಪರೀಕ್ಷೆ ನಡೆಸಿ.
ಕಚೇರಿಯಲ್ಲಿ ಶಿಫ್ಟ್ ಪದೇ ಪದೇ ಬದಲಾಗುತ್ತಿದ್ದರೆ ಅಥವಾ ನೈಟ್ ಶಿಫ್ಟ್ ಹೆಚ್ಚಾಗಿ ಇದ್ದರೆ, ಇದರಿಂದ ನಿದ್ರೆ ಸಮಸ್ಯೆ ಕಾಣಿಸಿಕೊಂಡು ಹಾರ್ಮೋನ್ ಅಸಮತೋಲನವಾಗಿ ಪಿರಿಯಡ್ಸ್ ಅಸಮತೋಲನವಾಗುತ್ತದೆ. ನೋವು ನಿವಾರಕ ಗುಳಿಗೆ ಅಥವಾ ಹೆಚ್ಚಾಗಿ ಔಷಧಿ ಸೇವನೆ ಮಾಡುವವರಿಗೆ ಪಿರಿಯಡ್ಸ್ ತಡವಾಗಿ ಆಗುತ್ತದೆ.
ತೂಕ ಹೆಚ್ಚಲಾಗಿದ್ದರೂ ಸಹ ದೇಹದಲ್ಲಿ ಅಸಮತೋಲನ ಉಂಟಾಗಿ ಋತುಸ್ರಾವ ತಡವಾಗಿ ಆಗುತ್ತದೆ. ಹಾಗೆ ಕಡಿಮೆ ತೂಕ ಸಹ ಒಳ್ಳೆಯದಲ್ಲ.

Leave a Comment