ಪಿರಗಾರದೊಡ್ಡಿಯಲ್ಲಿ ಸಿಡಿಲಿಗೆ ಬಾಲಕ ಬಲಿ

ಸುರಪುರ ಎ.16 : ತಾಲೂಕಿನ ಕಕ್ಕೇರಾ ದಿಂದ 1 ಕೀ ಮಿ ಅಂತರದಲ್ಲಿರುವ ಪಿರಗಾರದೊಡ್ಡಿಯ ಹೊಲದಲ್ಲಿ ಕುರಿಮೇಯಿಸಲು ಹೋದ ಬಾಲಕ ಮೌನೇಶ ಪರಮಣ್ಣಪೀರಗಾ  (12) ಎಂಬ ಬಾಲಕ ಮಧ್ಯಾಹ್ನ 1.45 ಸುಮಾರಿಗೆ  ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.ಈ ಘಟನೆಯಿಂದ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತುಸ್ಥಳಕ್ಕೆ ಗ್ರಾಮ ಲೆಕ್ಕ ಪಾಲಕ ಸಂತೋಷ ರೆಡ್ಡಿ ಹಾಗೂ ಬೆ ಜೆಪಿ ಯುವಮುಖಂಡ ಬಬ್ಲೂಗೌಡ ನಾಯಕ, ರಾಜೂ ಹವಲ್ದಾರ ಇತರರು ಭೇಟಿ ನೀಡಿ ಸಾಂತ್ವನ ಹೇಳಿದರು.ಕಕ್ಕೇರಾ ಪಟ್ಟಣದ ಪ್ಯಾಟಿ ಕಾಲೂನಿಯಲ್ಲಿ ಬಿರುಗಾಳಿಗೆ 5 ವಿದ್ಯುತ ಕಂಬಗಳು ದರೆಗುಳಿದಿವೆ ಇದೇ ಕಾಲೂನಿಯ ಮನೆಯೊಂದರ ಮೇಲೆ ಬೃಹತ್‍ಕಾರದ ಮರವೊಂದು ಬಿದ್ದು ಬೈಕಗೆ ಹಾನಿಯಾಗಿದೆ ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದುಬಂದಿದೆ.ಬೇಸಿಗೆಯ ಸುಡು ಬಿಸಿಲಿಗೆ ತತ್ತರಿಸಿದ್ದ ಜನತೆಗೆ ಭಾನುವಾರ ಮಧ್ಯಾಹ್ನ ಸುರಿದ ಮಳೆಯಿಂದ ತಂಪು ತಂದಿದೆ .

Leave a Comment