ಪಿಡಿಓ ಆತ್ಮಹತ್ಯೆ

ಮುನ್ನೂರು ಗ್ರಾ,ಪಂ.ನಲ್ಲಿ ನಡೆದ ಘಟನೆ
ಮಂಗಳೂರು, ಜೂ.೧೩- ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಪಂಚಾಯತ್ ಕಟ್ಟಡದೊಳಗಿನ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಉಳ್ಳಾಲ ಸಮೀಪದ ಮುನ್ನೂರು ಎಂಬಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ಕೃಷ್ಣಸ್ವಾಮಿ(೪೭) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಇಂದು ಬೆಳಗ್ಗೆ ಪಂಚಾಯತ್ ಸಿಬ್ಬಂದಿ ಬಾಗಿಲು ತೆರೆದಿದ್ದು ನಂತರ ಶೌಚಾಲಯದ ಬಳಿ ಕೃಷ್ಣಸ್ವಾಮಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್‌ನೋಟ್ ಕೂಡಾ ಪತ್ತೆಯಾಗಿದ್ದು ಅದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾವಿನ ಬಳಿಕ ನನ್ನ ಕೆಲಸವನ್ನು ಪತ್ನಿಗೆ ನೀಡಿ. ನನ್ನ ಮಗಳನ್ನು ಸಾಕಲು ಆಕೆಗೆ ನೆರವು ನೀಡಿ’ ಎಂದು ಬರೆಯಲಾಗಿದೆ. ಕೃಷ್ಣಸ್ವಾಮಿ ಕಚೇರಿಯಲ್ಲಿ ಎಲ್ಲರೊಂದಿಗೆ ಆತ್ಮೀಯರಾಗಿದ್ದು ಅವರ ಸಾವಿಗೆ ಕಾರಣ ಬಯಲಾಗಿಲ್ಲ. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

Leave a Comment