: ಪಿಜಿಗೆ ಉದ್ದಿಮೆ ಪರವಾನಗಿ ಕಡ್ಡಾಯ

ತುಮಕೂರು : ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಪಿಜಿ ಸೆಂಟರ್‌ಗಳನ್ನು ನಡೆಸುವವರು ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಪರವಾನಗಿ ಪಡೆಯದೇ ಪಿಜಿ ಸೆಂಟರ್ ಉದ್ದಿಮೆ ನಡೆಸುತ್ತಿರುವುದು ಸಾರ್ವಜನಿಕರಿಂದ ಹಾಗೂ ದಿನಪತ್ರಿಕೆಗಳಲ್ಲಿನ ದೂರುಗಳಿಂದ ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಪಿಜಿ ಸೆಂಟರ್ ನಡೆಸುತ್ತಿರುವವರು ದಿನಾಂಕ 20-1-2020 ರೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಉದ್ದಿಮೆ ಪರವಾನಗಿ ಪಡೆದು ಉದ್ದಿಮೆ ನಡೆಸಬೇಕು. ತಪ್ಪಿದಲ್ಲಿ ನಿಯಮಬಾಹಿರವಾಗಿ ಉದ್ದಿಮೆ ನಡೆಸಲಾಗುತ್ತಿದೆ ಎಂದು ಪರಿಗಣಿಸಿ ಉದ್ದಿಮೆಯನ್ನು ಮುಚ್ಚುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸೂಚಿಸಿದ್ದಾರೆ.

Leave a Comment