ಪಿಗ್ಗಿ, ದಿಪ್ಪಿ, ಸಾರಗೆ ಇನ್ಸ್ಟಾಗ್ರಾಮರ್ಸ್ ಆಫ್ ದಿ ಇಯರ್ ಪ್ರಶಸ್ತಿ

ಮುಂಬೈ, ಮೇ ೨- ಇತ್ತೀಚೆಗೆ ಬಾಲಿವುಡ್ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯೆರಾಗಿದ್ದಾರೆ. ತರವೇರಿ ಪೋಸ್ಟ್‌ಗಳನ್ನು ಹಾಕುವ ಮೂಲಕ ನಾ ಮುಂದು ತಾ ಮುಂದು ಎಂದು ಫೈಪೋಟಿಗೆ ಬಿದ್ದಿದ್ದಾರೆ.

ಅದರಲ್ಲೂ ಟ್ವಿಟರ್ ಹಾಗೂ ಇನ್ಸ್ಟ್‌ಗ್ರಾಮ್‌ಗಳಲ್ಲಿ ಬಾಲಿವುಡ್ ಮಂದಿ ಪ್ರತಿನಿತ್ಯ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡು ಅಭಿಮಾನಿಗಳೊಂದಿಗೆ ಒಡನಾಟ ಇರಿಸಿಕೊಂಡಿದ್ದಾರೆ. ಇದನ್ನೇ ಆಧರಿಸಿ ಇನ್ಸ್ಟಾಗ್ರಾಮ್ ನೀಡುವ ಇನ್ಸ್ಟಾಗ್ರಾಮರ್ಸ್ ಆಫ್ ದಿ ಇಯರ್-೨೦೧೯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಈ ಬಾರಿ ವಿವಿಧ ಕ್ಯಾಟಗರಿಯಡಿಯಲ್ಲಿ ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಹಾಗೂ ಸಾರಾ ಅಲಿಖಾನ್‌ಗೆ  ಗೌರವ ದೊರಕಿದೆ. ದೇಶದಲ್ಲಿ ಸ್ಟಾರ್‌ಗಳ ಪೈಕಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪಿಗ್ಗಿಗೆ ಮೋಸ್ಟ್ ಫಾಲೋವ್ಡ್ ಅಕೌಂಟ್ ಅನ್ನೋ ಅವಾರ್ಡ್ ಸಿಕ್ಕಿದೆ. ಡಿಂಪಲ್ ಕ್ವೀನ್ ದೀಪಿಕಾಗೆ ಸ್ಟೋರಿ ಮೂಲಕ ವಿಡಿಯೋ, ಫೋಟೋ ಹಾಕಿದಕ್ಕೆ ಸ್ಟೋರಿ ಟೆಲ್ಲರ್ ಆಫ್ ದ ಇಯರ್ ಪ್ರಶಸ್ತಿ ದೊರಕಿದೆ.

ಇನ್ನು ಸದ್ಯ ಸಿನಿಮಾಗೆ ಎಂಟ್ರಿ ಕೊಟ್ಟು ಶೈನ್ ಆಗುತ್ತಿರುವ ಸಾರಾಳನ್ನ ಜನರು ಫಾಲೋ ಮಾಡೋದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ರೈಸಿಂಗ್ ಸ್ಟಾರ್ ಅವಾರ್ಡ್ ಸಾರಾಗೆ ದೊರಕಿದೆ.

Leave a Comment