ಪಿಕಲಿಹಾಳ ಅಯ್ಯಪ್ಪ ಸ್ವಾಮಿರಿಂದ ರಕ್ತದಾನ – ಶ್ಲಾಘನೀಯ

ಲಿಂಗಸೂಗೂರು.ಜೂ.19- ತಾಲೂಕಿನ ಪಿಕಲಿಹಾಳ ಗ್ರಾಮದ ಪಿಕಲಿಹಾಳ ಅಯ್ಯಪ್ಪ ಸ್ವಾಮಿ ಹಿರೇಮಠ ಇವರು ವೃತ್ತಿಯಲ್ಲಿ ಛಾಯಾಗ್ರಾಹಕ ಉದ್ಯಮಿಯಾಗಿದ್ದು, ಪ್ರವೃತ್ತಿಯಲ್ಲಿ ಡಾ.ಪಂ.ವಡವಾಟಿಯವರ ಶಿಷ್ಯನಾಗಿ ಸಂಗೀತ ಅಭ್ಯಾಸ ಮಾಡುತ್ತಿದ್ದು, ಕಳೆದ ಹದಿನೈದರಿಂದ ಇಪ್ಪತ್ತು ವರ್ಷಗಳಿಂದ ಇಲ್ಲಿಯವರೆಗೆ ಸುಮಾರು 68 ಜನರಿಗೆ ರಕ್ತದಾನ ಮಾಡಿ ಸಾರ್ವಜನಿಕವಾಗಿ ಸೇವೆ ಸಲ್ಲಿಸುತಿದ್ದಾರೆಂದು.
ಇತ್ತೀಚಿಗೆ ಜರುಗಿದ ಆಶೀರ್ವಾದ ಪೌಂಡೇಷನ್ ಹಾಗೂ ಭಾರತೀಯ ರೆಡ್ ಕ್ರಾಸ್ ವತಿಯಿಂದ ಜರುಗಿದ ಬೃಹತ್ ರಕ್ತದಾನ ಮೇಳದಲ್ಲಿ ಭಾಗವಹಿಸಿದ ಪಿಕಳಿಹಾಳ ಅಯ್ಯಪ್ಪ ಸ್ವಾಮಿ ಅವರು ರಕ್ತದಾನ ಮಾಡಿ ನಂತರ ಮಾತನಾಡಿದರು. ರಕ್ತದಾನವೆಂಬುದು ಜೀವದಾನವಿದ್ದಂತೆ, ಆದಕಾರಣ ಯುವಕರು ರಕ್ತದಾನ ಮಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು. ಇವರು ಸಹಿತ 68 ನೇ ಬಾರಿ ರಕ್ತದಾನ ಮಾಡಿದ್ದನ್ನು ಗುರುತಿಸಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಬಿ.ವೇದಮೂರ್ತಿ. ಡಾ.ಬಸನಗೌಡ ಪಾಟೀಲ್ ಅವರು ಸನ್ಮಾನಿಸಿ ಗೌರವಿಸಿದರು.
ಎಸ್.ಪಿ. ಸಾಹೇಬರು ಸನ್ಮಾನಿತರೊಂದಿಗೆ ಮಾತನಾಡಿ, ನೀವು ಅರವತ್ತೆಂಟು ಬಾರಿ ರಕ್ತದಾನ ಮಾಡಿದ್ದು, ತುಂಬ ಶ್ಲಾಘನೀಯವಾದದ್ದು, ಹೀಗೆ ಮುಂದೆನೂ ನಿಮ್ಮ ಸೇವೆ ನೂರರವರೆಗೆ ಮುಂದುವರಿಯಲಿ, ನಿಮಗೆ ಆ ಭಗವಂತ ಒಳ್ಳೇ ಆರೋಗ್ಯ ಕೊಡಲಿ ಎಂದು ಹಾರೈಸಿ ಪರಸ್ಪರವಾಗಿ ಹಸ್ತಾವಲಾಗನ ಮಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.

Leave a Comment