ಪಿಒಪಿ ಗಣೇಶ ಬೇಡ: ನಟ ಸುದೀಪ್ ಕರೆ

 ಬೆಂಗಳೂರು, ಆ 29 – ಗೌರಿ, ಗಣೇಶ ಹಬ್ಬ ಹತ್ತಿರವಾಗುತ್ತಿದ್ದು, ಮಾರುಕಟ್ಟೆಗಳಲ್ಲಿ ಮೂರ್ತಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ  ಇದೇ ಸಂದರ್ಭದಲ್ಲಿ ಪಿಒಪಿ ಗಣೇಶ ಬೇಡ, ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ನಟ ಕಿಚ್ಚ ಸುದೀಪ ಕರೆ ನೀಡಿದ್ದಾರೆ

  ನಾವು ನಮ್ಮ ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ವಾಪಸ್ ಕೊಡುತ್ತಿರುವುದನ್ನು ನಾವು ಆನುಭವಿಸಿದ್ದೇವೆ. ಹಾಗಾಗಿ ಈ ಸಲ ನಮ್ಮ ವಿಘ್ನ ನಿವಾರಕನ ಹಬ್ಬಕ್ಕೆ , ಪಿಓಪಿ ಗಣೇಶನ ಮೂರ್ತಿಗಳನ್ನ ಉಪಯೋಗಿಸದೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನ ಮಾತ್ರ ಬಳಸಿ,ಪ್ರಕೃತಿ ಮಾತೆಯನ್ನ ಕಾಪಾಡೋಣ.”ಇದು ನನ್ನ ನಿಮ್ಮ ನಮ್ಮೆಲ್ಲರ ಜವಾಬ್ದಾರಿ” ಎಂದು ಟ್ವೀಟ್ ಮಾಡಿದ್ದಾರೆ

  ಪ್ರಾಕೃತಿಕ ವಿಕೋಪಗಳ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಶೇರ್ ಮಾಡುವ ನೀಡುವ ಮೂಲಕ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಕೂರಿಸಿ ಎಂದು ಸುದೀಪ್ ಮನವಿ ಮಾಡಿದ್ದಾರೆ

  ಈಗಾಗಲೇ ಹಲವು ಸಂಘ ಸಂಸ್ಥೆಗಳು ಮಣ್ಣನ ಗಣಪನನ್ನು ಮಾಡುವ ಪ್ರಾತ್ಯಕ್ಷಿಕೆ ಹಾಗೂ ಉಚಿತ ಮಣ್ಣಿನ ಗಣಪ ವಿತರಣೆ ಮೂಲಕ ಪರಿಸರ ಸ್ನೇಹಿ ಗಣೇಶನ ಪೂಜೆಗೆ ಬೆಂಬಲ ನೀಡುತ್ತಿವೆ

Leave a Comment