ಪಿಎಸ್ಐ ಸಮಯ ಪ್ರಜ್ಞೆ: ಬೆಂಕಿಯಿಂದ ಬಚಾವಾದ ಮೆಕ್ಕೆ ಜೋಳದ ಗದ್ದೆ

ಜಮಖಂಡಿ,ಮಾ.26-ಪಿಎಸ್ಐ ಒಬ್ಬರ ಸಮಯ ಪ್ರಜ್ಞೆಯಿಂದಾಗಿ ಬೆಂಕಿಗಾಹುತಿಯಾಗುತ್ತಿದ್ದ ಮೆಕ್ಕೆ ಜೋಳದ ಗದ್ದೆ ಉಳಿದಿದೆ. ಗ್ರಾಮಿಣ ಠಾಣೆ ಪಿಎಸ್ಐ ರಾಜು ಅವಟಿ ಅವರು ಬುಧವಾರ ಕೊರೊನಾ ವೈರಸ್ ಬಗ್ಗೆ ಗ್ರಾಮಗಳಿಗೆ ಭೇಟಿ ನಿಡಿ ಜನರಲ್ಲಿ ಜಾಗೃತಿ ಮೂಡಿಸಲು ಹೋಗುತ್ತಿದ್ದಾಗ ಸಿದ್ದಾಪುರ ಹತ್ತಿರ  ರಸ್ಥೆಯಲ್ಲಿ ಮೆಕ್ಕೆಜೋಳದ ಗದ್ದೆಯ ಪಕ್ಕ ಬೆಂಕಿ ಹಚ್ಚಿದು ನೋಡಿ  ಬೆಂಕಿ ಮೆಕ್ಕೆ ಜೋಳದ ಗದ್ದೆಗೆ ತಗುಲದಂತೆ ತಗಲು ಅದನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಕ್ಕೆ ಜೋಳದ ಗದ್ದೆಯ ಪಕ್ಕ ಬೆಂಕಿ ಬಿದ್ದಿದ್ದು ನೋಡಿದ ಪಿಎಸ್ಐ ಅವರು ಕಾರಿನಿಂದ ಕೆಳಗಿಳಿದು ಬೇವಿನ ಸೊಪ್ಪಿನಿಂದ ಬೆಂಕಿಯನ್ನು ನಂದಿಸುವುದರ ಮೂಲಕ ಮೆಕ್ಕೆ ಜೋಳದ ಗದ್ದೆಗೆ ಬೆಂಕಿ ತಗುಲುವುದಿನ್ನು ತಪ್ಪಿಸಿದ್ದಾರೆ. ಪಿಎಸ್ಐ ಅವರ ಸಮಯ ಪ್ರಜ್ಞೆಗೆ ರೈತ ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ತದನಂತರ ಪಿಎಸ್ಐ ಅವರು ಗ್ರಾಮಗಳಿಗೆ ತೆರಳಿ ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಜನ ಅಂತರ ಕಾಯ್ದುಕೊಳ್ಳಬೇಕು ಮತ್ತು ಮುಂಜಾಗ್ರತೆ ವಹಿಸಬೇಕು, ವಿನಾಕಾರಣ ಯಾರೂ ಮನೆಯಿಂದ ಹೊರಬರದೆ ಮನೆಯಲ್ಲಿಯೇ ಉಳಿದು ಕೊಂಡು ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳುವಳಿಕೆ ನೀಡಿದರು.

Leave a Comment