ಪಿಎಂ-ಕೇರ್ಸ್ ನಿಧಿಗೆ ಕ್ರಿಕೆಟಿಗ ಗಂಭೀರ್ 2 ವರ್ಷದ ವೇತನ ಘೋಷಣೆ

ನವದೆಹಲಿ, ಏ 2 -ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಗುರುವಾರ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸಲು ಕೇಂದ್ರ ಸರಕಾರ ತೆರೆದಿರುವ ಪಿಎಂ-ಕೇರ್ಸ್ ನಿಧಿಗೆ ತಮ್ಮ ಎರಡು ವರ್ಷದ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ.
” ಜನರು ತಮ್ಮ ದೇಶದವರಿಗೆ ಏನು ಮಾಡಬಹುದು ಎಂದು ಕೇಳುತ್ತಾರೆ. ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ಎಂಬುದು ನಿಜವಾದ ಪ್ರಶ್ನೆ. ನನ್ನ ಎರಡು ವರ್ಷಗಳ ವೇತನವನ್ನು ನಾನು ಪಿಎಂ-ಕೇರ್ಸ್ ನಿಧಿಗೆ ನೀಡುತ್ತಿದ್ದೇನೆ. ನೀವು ಸಹ ಇದೇ ರೀತಿ ಮುಂದೆ ಬರಬೇಕು, ” ಎಂದು ಗಂಭೀರ್ ತಮ್ಮ ಅಧಿಕೃತ ಟ್ವೀಟ್ ನಲ್ಲಿ ಇತರ ಜನರಿಗೆ ದೇಣಿಗೆ ನೀಡುವಂತೆ ಕೋರಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಗಂಭೀರ್ ಈಗಾಗಲೇ ಸಂಸದರ ಸ್ಥಳೀಯ ಅಭಿವೃದ್ಧಿ ಯೋಜನಾ ನಿಧಿಗೆ ಒಂದು ಕೋಟಿ ರೂ. ನೆರವು ಘೋಷಿಸಿದ್ದಾರೆ.

Leave a Comment