ಪಿಂಚಣಿ ಹೆಚ್ಚಳಕ್ಕೆ ಪಿಂಚಣಿದಾರರ ಸಂಘ ಒತ್ತಾಯ

ರಾಯಚೂರು.ಅ.10- ಇಪಿಎಸ್ ಪಿಂಚಣಿದಾರರು ಪಿಂಚಣಿಯನ್ನು ಹೆಚ್ಚಳ ಮಾಡಬೇಕೆಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪಿಎಫ್‌ ಕಛೇರಿವರೆಗೆ ಜಿಲ್ಲಾ ಪಿಂಚಣಿದಾರರ ಸಂಘದ ಪದಾಧಿಕಾರಿಗಳು ಇಂದು ಸಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಕ್ಷೇತ್ರ ಸೇರಿದಂತೆ ಖಾಸಗಿ ಕ್ಷೇತ್ರದಲ್ಲಿ 33 ವರ್ಷ ಕಾರ್ಯನಿರ್ವಹಿಸಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಇಪಿಎಸ್ ಸೌಲಭ್ಯ ಹೊಂದಿದವರಿಗೆ ತಿಂಗಳಿಗೆ 1500 ರೂ. ಪಿಂಚಣಿ ಪಡೆಯಲಾಗುತ್ತಿದೆ. ಇಂದು ಜೀವನ ನಡೆಸಲು ಕಷ್ಟದಾಯಕವಾಗಿದೆ. ಕನಿಷ್ಟ 3 ಸಾವಿರ ಹೆಚ್ಚಿಸಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ರವಾನಿಸಿ ಒತ್ತಾಯಿಸಿದರು.
2014 ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಸ್ತಿತ್ವದ ಸಮಯದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಅಂದು ಮಾಜಿ ಕೇಂದ್ರ ಸಚಿವ ದಿ.ಆನಂತ ಕುಮಾರ ಅವರು ಹೈಪಾವರ್ ಸಮಿತಿ ರಚಿಸಿ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದರು. ವರದಿಯು ಸರ್ಕಾರಕ್ಕೆ ತಲುಪಿದ್ದು, ವರದಿಯಲ್ಲಿ 2 ಸಾವಿರ ನೀಡಬೇಕೆಂದು ಹೇಳಲಾಗಿದೆ. ಕೂಡಲೇ ಸರ್ಕಾರವು ವರದಿಯನ್ನು ತಿರಸ್ಕರಿಸಿ 3 ಸಾವಿರ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶರಣಬಸಪ್ಪ, ಭೀಮಸೇನ ರಾವ್, ಕರಡಿ ಸಂಗಪ್ಪ, ಚಂದ್ರಕಾಂತ, ಸಲೀಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment