ಪಾಷಾರಿಗೆ ಆತ್ಮೀಯ ಬೀಳ್ಕೊಡುಗೆ

ರಾಯಚೂರು.ಸೆ.02- ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಿದ ವೈದ್ಯಾಧಿಕಾರಿ ಪಾಷಾ ಅವರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಶಹಾಬುದ್ದೀನ್ ಕಾಳೆಖಾನ್ ಮಾತನಾಡಿ, ಪಾಷಾ ಅವರು ಕಳೆದ 4 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದಾರೆಂದರು. ಖೈದಿಗಳನ್ನು ತಮ್ಮ ಕುಟುಂಬ ಸದಸ್ಯರೆಂದು ಭಾವಿಸಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು ಎಂದರು. ಈ ಸಂದರ್ಭದಲ್ಲಿ ಉಪ ಅಧೀಕ್ಷಕ ಅಬ್ದುಲ್ ಶಾಕೂರು, ಅಬ್ಬಾಸ್, ವಿರುಪಾಕ್ಷಿ, ದೇವೇಂದ್ರ ಉಪಸ್ಥಿತರಿದ್ದರು.

Leave a Comment