ಪಾಲಿಕೆ ಪೋಟೋ ಬಳಸಿ ಬಳ್ಳಾರಿ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ

ಬಳ್ಳಾರಿ,ಸೆ.6: ಮುಂದಿನ ವರ್ಷದ ಆರಂಭದಲ್ಲಿ ನಡೆಯಬೇಕಾಗಿರುವ ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಗೆ ಈಗಾಗಲೇ ಸರಕಾರ ಮೀಸಲಾತಿಯನ್ನು ಘೋಷಣೆ ಮಾಡಿದ್ದು. ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗದ ಮಹಿಳೆ ಹಾಗೂ ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಆದೇಶ ಹೊರಡಿಸಿದೆ.

ಈವರೆಗೆ ಪಾಲಿಕೆಯಲ್ಲಿ 35 ವಾರ್ಡುಗಳಿದ್ದವು ಈಗ ಅವನ್ನು 39 ಕ್ಕೆ ಏರಿಸಿ ಅವುಗಳ ಮೀಸಲಾತಿಯನ್ನು ಸಹ ಪ್ರಕಟಿಸಿದೆ. ಪಾಲಿಕೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಸಂಸದರು, ವಿಧಾಣ ಪರಿಷತ್ ಸದಸ್ಯರು, ಸ್ಥಳೀಯ ಶಾಸಕರೂ ಮತ ಚಲಾಐಇಸುವ ಹಕ್ಕು ಪಡೆದಿರುವುದರಿಂದ 39 ಸದಸ್ಯರ ಜೊತೆಗೆ ಇಬ್ಬರು ವಿಧಾನ ಪರಿಷತ್ ಸದಸ್ಯರು, ಇಬ್ಬರು ಶಾಸಕರು, ಒಬ್ಬರು ರಾಜ್ಯ ಸಭಾ ಸದಸ್ಯರು, ಮತ್ತು ಒಬ್ಬರು ಲೋಕಸಭಾ ಸದಸ್ಯರು ಮತ ಚಲಾಯಿಸುವುದರಿಂದ ಇವರಲ್ಲಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಗ್ರಾಮೀಣ ಶಾಸಕ ನಾಗೇಂದ್ರ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ನಾಲ್ಕು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿ ಕಡೆ ಒರ್ವ ಶಾಸಕರಿದ್ದು ಲೋಕಸಭಾ ಸದಸ್ಯ ಸ್ಥಾನ ಯಾರ ಪಾಲಗಲಿದೆ ಹೇಳಲಾಗದು.

39 ಸದಸ್ಯರು ಮತ್ತು ಆರು ಜನ ಇತರೇ ಪ್ರತಿನಿಧಿಗಳು ಮತ ಚಲಾಯಿಸುವ ಹಕ್ಕು ಪಡೆದಿರುವುದರಿಂದ 45 ಮತಗಳಾಗಲಿದ್ದು ಅಧಿಕಾರ ಪಡೆಯಲು ಸರಳ ಬಹುಮತಕ್ಕೆ 23 ಮತಗಳು ಬೇಕಾಗಾಲಿದೆ.

ಕಾಂಗ್ರೆಸ್ ಬಳಿ ಈಗಾಗಲೇ ನಾಲ್ಕು ಮತಗಳಿರುವುದರಿಂದ ಅದು 39 ರಲ್ಲಿ 19 ಸ್ಥಾನಗಳಲ್ಲಿ ಗೆದ್ದರೂ ಅಧಿಕಾರ ಪಡೆಯಬಹುದು ಆದರೆ ಬಿಜೆಪಿ 22 ಸ್ಥಾನಗಳನ್ನು ಪಡೆಯಬೇಕಿದೆ.

ವಾರ್ಡುವಾರು ಮೀಸಲಾತಿ ವಿವರ ಇಂತಿದೆ:
1ನೇ ವಾರ್ಡಿಗೆ ಪರಿಶಿಷ್ಟ ಜಾತಿ, 2ನೇ ವಾರ್ಡಿಗೆ ಹಿಂದುಳಿದ ವರ್ಗ (ಎ) ಮಹಿಳೆ, 3ನೇ ವಾರ್ಡಿಗೆ ಸಾಮಾನ್ಯ, 4ನೇ ವಾರ್ಡಿಗೆ ಪರಿಶಿಷ್ಟ ಜಾತಿ ಮಹಿಳೆ, 5ನೇ ವಾರ್ಡಿಗೆ ಪರಿಶಿಷ್ಟ ಪಂಗಡ, 6ನೇ ವಾರ್ಡಿಗೆ ಹಿಂದುಳಿದ ವರ್ಗ (ಬಿ) ಮಹಿಳೆ, 7ನೇ ವಾರ್ಡಿಗೆ ಪರಿಶಿಷ್ಟ ಜಾತಿ ಮಹಿಳೆ, 8ನೇ ವಾರ್ಡಿಗೆ ಸಾಮಾನ್ಯ, 9ನೇ ವಾರ್ಡಿಗೆ ಹಿಂದುಳಿದ ವರ್ಗ (ಎ), 10ನೇ ವಾರ್ಡಿಗೆ ಸಾಮಾನ್ಯ, 11ನೇ ವಾರ್ಡಿಗೆ ಹಿಂದುಳಿದ ವರ್ಗ (ಬಿ), 12ನೇ ವಾರ್ಡಿಗೆ ಹಿಂದುಳಿದ ವರ್ಗ (ಎ) ಮಹಿಳೆ, 13ನೇ ವಾರ್ಡಿಗೆ ಸಾಮಾನ್ಯ ವರ್ಗ, 14ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 15ನೇ ವಾರ್ಡಿಗೆ ಹಿಂದುಳಿದ ವರ್ಗ (ಎ), 16ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 17ನೇ ವಾರ್ಡಿಗೆ ಹಿಂದುಳಿದ ವರ್ಗ (ಎ) ಮಹಿಳೆ, 18ನೇ ವಾರ್ಡಿಗೆ ಸಾಮಾನ್ಯ ವರ್ಗ, 19ನೇ ವಾರ್ಡಿಗೆ ಸಾಮಾನ್ಯ, 20ನೇ ವಾರ್ಡಿಗೆ ಸಾಮಾನ್ಯ ವರ್ಗ.
ಇನ್ನು 21ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 22ನೇ ವಾರ್ಡಿಗೆ ಪರಿಶಿಷ್ಟ ಪಂಗಡ, 23ನೇ ವಾರ್ಡಿಗೆ ಹಿಂದುಳಿದ ವರ್ಗ (ಎ), 24ನೇ ವಾರ್ಡಿಗೆ ಸಾಮಾನ್ಯ ವರ್ಗ, 25ನೇ ವಾರ್ಡಿಗೆ ಹಿಂದುಳಿದ ವರ್ಗ (ಎ), 26ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 27ನೇ ವಾರ್ಡಿಗೆ ಸಾಮಾನ್ಯ ವರ್ಗ, 28ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 29ನೇ ವಾರ್ಡಿಗೆ ಪರಿಶಿಷ್ಟ ಜಾತಿ ಮಹಿಳೆ, 30ನೇ ವಾರ್ಡಿಗೆ ಸಾಮಾನ್ಯ, 31ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 32ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 33ನೇ ವಾರ್ಡಿಗೆ ಪರಿಶಿಷ್ಟ ಪಂಗಡ ಮಹಿಳೆ, 34ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 35ನೇ ವಾರ್ಡಿಗೆ ಪರಿಶಿಷ್ಟ ಜಾತಿ, 36ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 37ನೇ ವಾರ್ಡಿಗೆ ಸಾಮಾನ್ಯ ಮಹಿಳೆ, 38ನೇ ವಾರ್ಡಿಗೆ ಪರಿಶಿಷ್ಟ ಜಾತಿ, 39ನೇ ವಾರ್ಡಿಗೆ ಪರಿಶಿಷ್ಟ ಪಂಗಡ ಮಹಿಳೆ ಗೆ ಮೀಸಲಿದೆ.

Leave a Comment