ಪಾಲಿಕೆ ಉಪಮೇಯರಾಗಿ ದಿವ್ಯಾಕುಮಾರಿ ಆಯ್ಕೆ

ಬಳ್ಳಾರಿ, ಡಿ.5: ಕೇವಲ ಕೆಲವೇ ದಿನಗಳು ಬಾಕಿರುವ ಬಳ್ಳಾರಿ ಮಹಾನಗರ ಪಾಲಿಕೆಯ ಉಪಮೇಯರ್ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನಗರದ 27ನೇ ವಾರ್ಡ್ ನ ಕಾಂಗ್ರೆಸ್ ನ ಕಾರ್ಪೊರೇಟರ್ ಐ.ದಿವ್ಯಾಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಇಂದು ಬೆಳಿಗ್ಗೆ ಚುನಾವಣಾಧಿಕಾರಿಯಾಗಿರುವ ಪಾಲಿಕೆ ಆಯುಕ್ತ ಮೊಹಮ್ಮದ್ ಮುನೀರ್ ರವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೇಯರ್ ಸವಿತಾಬಾಯಿ, ಮಾಜಿ ಮೇಯರ್ ವೆಂಕಟರಮಣ, ಸದಸ್ಯರಾದ ಕೆರೆಕೊಡಪ್ಪ, ಬೆಣಕಲ್ಲು ಬಸವನಗೌಡ ಮೊದಲಾದವರು ಇದ್ದರು. ಅವರೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಆಯ್ಕೆ ಅವಿರೋಧವಾಗಿ ನಡೆಯಿತು.

 

Leave a Comment