ಪಾಲಿಕೆಯಲ್ಲಿ ನಕಲಿ ಟ್ರೇಡ್ ಲೈಸೆನ್ಸ್ ಕಾರುಬಾರು

ಬಳ್ಳಾರಿ, ಮಾ.14: ನಗರದಲ್ಲಿ ಸಾವಿರಾರು ಜನ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ನ್ನು ಮಾತ್ರ ಕೇವಲ ನೂರಾರು ಜನ ಪಡೆದಿದ್ದಾರೆ. ಅನೇಕರು ನಕಲಿ ಟ್ರೇಡ್ ಲೈಸೆನ್ಸ್ ಗಳನ್ನು ಮಾಡಿಕೊಂಡು ಪಾಲಿಕೆಯಲ್ಲೇ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.

ಈ ಚಿತ್ರದಲ್ಲಿ ಪ್ರಕಟಿಸಿರುವ ಃಐಙ-ಖಿಐ-5880-2018-19 ನಂಬರ್ ನ ಟ್ರೇಡ್ ಲೈಸೆನ್ಸ್ ನಕಲಿ ಎಂದು ಪತ್ತೆಯಾಗಿದೆ.

ನಗರದ ಕೌಲ್ ಬಜಾರ್ ಪ್ರದೇಶದ ಜೆ.ಎಂ. ಬೀದಿಯ ಕೆ.ಅಶೋಕ್ ಕುಮಾರ್ ಎಂಬುವವರು ಪಡೆದಿದ್ದಾರೆ. ಈ ತಿಂಗಳ 31ಕ್ಕೆ ಇದರ ಅವಧಿ ಮುಗಿಯುತ್ತಿದೆ. ಇದೇ ರೀತಿ ಕಳೆದ 3 ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್ ವಹಿವಾಟುಗೆಂದು ಇದನ್ನು ಪಡೆಯಲಾಗಿದೆ. ಈ ಟ್ರೇಡ್ ಲೈಸೆನ್ಸ್ ನಕಲಿ ಎಂದು ತಿಳಿದು ಬಂದ ಮೇಲೆ ಪಾಲಿಕೆಯ ಕಛೇರಿಯಲ್ಲಿ ಈ ಕುರಿತು ಕಡತಗಳಲ್ಲಿ ಪರಿಶೀಲನೆ ನಡೆಸಿದರೆ ಇಂತಹ ಲೈಸೆನ್ಸ್ ಮಂಜೂರಾದ ಬಗ್ಗೆ ದಾಖಲೆ ಇಲ್ಲ.

ಇನ್ನು ಈ ನಕಲಿ ಟ್ರೇಡ್ ಲೈಸೆನ್ಸ್ ದಾಖಲೆಯ ಬಾರ್ ಕೋಡ್ ಪರೀಕ್ಷೆ ಮಾಡಿದರೆ ಈ ಹಿಂದೆ ಇದ್ದ ಆಯುಕ್ತ ಮಂಜುನಾಥ ನಲವಡಿ ಅವರ ಸಹಿ ಇದೆಯಂತೆ. ಈ ನಕಲಿ ಟ್ರೇಡ್ ಲೈಸೆನ್ಸ್ ಗಳನ್ನು ಪಾಲಿಕೆಯ ಆಯಕಟ್ಟಿನಲ್ಲಿರುವ ಅಧಿಕಾರಿಯೇ ಕೊಡುತ್ತಿದ್ದಾರೆಂದು ತಿಳಿದು ಬಂದಿದೆ.

ವಾಸ್ತವದಲ್ಲಿ ಲೈಸೆನ್ಸ್ ದಾಖಲೆಯಲ್ಲಿ ವ್ಯವಹಾರ ನಡೆಸುವ ಸಂಸ್ಥೆಯ ಹೆಸರು ಇರುತ್ತದೆ ಆದರೆ ಇದರಲ್ಲಿ ಅದು ಇಲ್ಲ.
ಇನ್ನು ಇದೇ ನಕಲಿ ಟ್ರೇಡ್ ಲೈಸೆನ್ಸ್ ನಿಂದಲೇ ಆರೋಗ್ಯ ಇಲಾಖೆಯ ಟೆಂಡರ್ ಪಡೆದಿದೆ. ಅಷ್ಟೇ ಏಕೆ ಇದೇ ಮಹಾನಗರ ಪಾಲಿಕೆಯಲ್ಲಿನ ಅನೇಕ ಮುದ್ರಣ ಕಾರ್ಯದ ಟೆಂಡರ್ ಗಳನ್ನು ಪಡೆದು ವಹಿವಾಟು ನಡೆಸಿದೆಯಂತೆ.
ಇದು ಸ್ಯಾಂಪಲ್ ಮಾತ್ರ ಇಂತಹ ಅನೇಕ ನಕಲಿ ಟ್ರೇಡ್ ಲೈಸೆನ್ಸ್ ಗಳು ನಗರದಲ್ಲಿ ವಹಿವಾಟು ನಡೆಸಿರುವುದರ ಜೊತೆಗೆ ಪಾಲಿಕೆಗೆ ನೀಡಬೇಕಾದ ಶುಲ್ಕವನ್ನು ವಂಚಿಸುತ್ತಿವೆ.

ದಾಖಲೆ ಸಮೇತ ನಮ್ಮ ಗಮನಕ್ಕೆ ತಂದಿದ್ದೀರಿ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದೆ. ನಕಲಿ ಎಂದು ಸಾಬೀತಾದರೆ ಕಾನೂನು ರೀತಿ ಲೈಸೆನ್ಸ್ ಪಡೆದ ಮತ್ತು ನೀಡಿದ ಅಧಿಕಾರದ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ.
ತುಷಾರಮಣಿ ಆಯುಕ್ತರು, ಮಹಾನಗರ ಪಾಲಿಕೆ ಬಳ್ಳಾರಿ.

Leave a Comment