ಪಾರು ಸೀರೆ ಸುಗ್ಗಿ ಸಂಭ್ರಮ- ವಿಜೇತರಿಗೆ ೨೫ ಸಾ.ರೂ ಮೌಲ್ಯದ ಸೀರೆ ಬಹುಮಾನ

ದೀಪಾವಳಿ ಅಂಗವಾಗಿ ಇತ್ತೀಚೆಗೆ ಪಾರು ಧಾರಾವಾಹಿ ತಂಡ ತನ್ನ ಅಭಿಮಾನಿಗಳಿಗಾಗಿ ಅರಸನಕೋಟೆ ಮನೆಯಲ್ಲಿ ಪಾರು ಸೀರೆ ಸುಗ್ಗಿ ಸಂಭ್ರಮ ಸ್ಪರ್ಧೆಯನ್ನು ಆಯೋಜಿಸಿತ್ತು. ಅಲ್ಲದೇ ವಿಜೇತರಿಗೆ ಅರಸನಕೋಟೆ ಕುಟುಂಬದೊಂದಿಗೆ ಬಾಳೆ ಎಲೆ ಊಟಕ್ಕೆ ಆಮಂತ್ರಣ ನೀಡಿ ಗಮನ ಸೆಳೆದಿದೆ.

ಕನ್ನಡದ ಜನಪ್ರಿಯ ಧಾರವಾಹಿಯಾದ ಪಾರು ತಂಡದ ಪಾರು (ಮೋಕ್ಷಿತಾ), ಆದಿತ್ಯ (ಶರತ್), ದಾಮಿನಿ (ಸಿತಾರಾ) ಮತ್ತು ಅಖಿಲಾಂಡೇಶ್ವರಿ (ವಿನಯಾ ಪ್ರಸಾದ್) ಅವರುಗಳು ದೀಪಾವಳಿಯಂದು ಅರಸನಕೋಟೆ ಮನೆಯಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ ಸಂಭ್ರಮಿಸಿದರು. ಪ್ರತಿ ಸಂಚಿಕೆಯ ಕೊನೆಯಲ್ಲಿ ಬರುವ ಪ್ರಶ್ನೆಗಳಿಗೆ ಎಸ್‌ಎಂಎಸ್ ಮೂಲಕ ಉತ್ತರಿಸಿ ಗೆದ್ದ ೧೦ ಅದೃಷ್ಟ ವಿಜೇತರು ಅಖಿಲಾಂಡೇಶ್ವರಿ ಮತ್ತು ಅವರ ಅರಸನಕೋಟೆ ಕುಟುಂಬ ಆಯೋಜಿಸಿದ್ದ ಸಂಭ್ರಮಾಚರಣೆಯ ಹಬ್ಬದ ರುಚಿಯನ್ನು ಸವಿಯುವ ಸುವರ್ಣಾವಕಾಶವನ್ನು ಪಡೆದರು. ಇದಲ್ಲದೆ, ಎಲ್ಲಾ ವಿಜೇತರಿಗೆ ಅಖಿಲಾಂಡೇಶ್ವರಿ ಉಡುವಂತಹ ಸುಮಾರು ೨೫ ಸಾವಿರ ರೂ ಬೆಲೆಬಾಳುವ ಸೀರೆಯನ್ನು ಬಹುಮಾನವಾಗಿ ನೀಡಲಾಯಿತು.

ಈ ರಸ ಪ್ರಶ್ನೆಯಲ್ಲಿ ಭಾಗವಹಿಸಿದ ಒಟ್ಟು ೭ ಲಕ್ಷ ವೀಕ್ಷಕರಲ್ಲಿ, ಧಾರವಾಡದ ಪೂರ್ಣಿಮಾ, ಚಿತ್ರದುರ್ಗದಿಂದ ಅನಿತಾ, ತುಮಕೂರಿನಿಂದ ಕಾವ್ಯಾ, ಬೆಳಗಾವಿಯಿಂದ ಶಿಲ್ಪಾ, ಹಾಸನದಿಂದ ಮಹಾದೇವಮ್ಮ, ಕೊಪ್ಪಳದ ಚೈತ್ರ, ಶಿವಮೊಗ್ಗದಿಂದ ಚಂದ್ರಕಲ ಮತ್ತು ಮೈಸೂರಿನಿಂದ ರಾಣಿ ಮತ್ತಿತರರ ವಿಜೇತರನ್ನು ಸಾಂಪ್ರದಾಯಿಕ ಆರತಿ ತಟ್ಟೆಯೊಂದಿಗೆ ಅರಸನಕೋಟೆ ಮನೆಗೆ ಸ್ವಾಗತಿಸಿದರು. ನಟರು ಪ್ರತಿಯೊಬ್ಬ ಅಭಿಮಾನಿಗಳು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಕಂಡುಕೊಳ್ಳುವ ಮೂಲಕ ಸಂವಾದಾತ್ಮಕ ಅಧಿವೇಶನವನ್ನು ಪ್ರಾರಂಭಿಸಿದರು.

ಚಿತ್ರದುರ್ಗದ ಅನಿತಾ, ತನ್ನ ಮಗ ಕುಶಾಲ್ ಕಾರ್ಯಕ್ರಮವನ್ನು ನೋಡಲು ಹೇಗೆ ಉತ್ಸುಕನಾಗುತ್ತಾನೆ. ಮತ್ತು ಆದಿತ್ಯ ನೀಡಿದ ಪ್ರತಿಯೊಂದು ಸಂಭಾಷಣೆಯನ್ನು ಹೇಗೆ ಅನುಕರಿಸುತ್ತಾನೆ ಎಂಬುದರ ಕುರಿತು ವಿವರಿಸಿದರು. ಧಾರವಾಡದ ಪೂರ್ಣಿಮಾ ತನ್ನ ತಂದೆಯೊಂದಿಗಿನ ಸಂಬಂಧಕ್ಕೆ, ಪಾರು ಹಾಗು ಅವರ ತಂದೆಯ ಪಾತ್ರಗಳಿಗೆ ತನ್ನ ವೈಯಕ್ತಿಕ ಸಂಪರ್ಕವನ್ನು ಸ್ಪಷ್ಟಪಡಿಸಿದರು. ಪ್ರತಿ ಮನೆಯ ಪುರುಷರೂ ಸಹ ಈ ಧಾರಾವಾಹಿಯನ್ನು ನೋಡಲು ಹೇಗೆ ಸಂತೋಷಪಡುತ್ತಾರೆ ಎಂಬುದು ಆಕರ್ಷಕವಾಗಿದೆ ಎಂದು ಅಖಿಲಾಂಡೇಶ್ವರಿ ಆಶ್ಚರ್ಯಪಟ್ಟರು.

ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳು, ತಮ್ಮ ನೆಚ್ಚಿನ ಕಲಾವಿದರಿಗೆ ವಿಶಿಷ್ಟವಾದ ಉಡುಗೊರೆಗಳನ್ನು ತಂದಿದ್ದರು. ಕೊಪ್ಪಳದ ರೇಣುಕಾ ದೇವಿ ಅವರು ಅಖಿಲಾಂಡೇಶ್ವರಿಗೆ ನೀಲಿ ಕಾಟನ್ ಸೀರೆ ಮತ್ತು ಸಾಂಪ್ರದಾಯಿಕ ಬಾಗಿನವನ್ನು ನೀಡಿದರು. ಇದರಿಂದ ಮನಸೋತ ಅಖಿಲಾಂಡೇಶ್ವರಿ ಅವರು ಈ ಸೀರೆಯನ್ನು ಪಾರು ಧಾರಾವಾಹಿಯ ಒಂದು ಕಂತಿನಲ್ಲಾದರೂ ಉಡುವುದಾಗಿ ಭರವಸೆ ನೀಡಿದರು. ಶಿವಮೊಗ್ಗದ ಮೇಘನಾ ಪಾರುವಿಗೆ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಿ, ಈ ಧಾರಾವಾಹಿಯು ಯಾವುದೇ ಹಾನಿಯನ್ನು ಎದುರಿಸಬಾರದು ಎಂದು ಪ್ರಾರ್ಥಿಸಿದರು. ಧಾರವಾಡ ಮೂಲದ ಪೂರ್ಣಿಮಾ ಹಬ್ಬದ ಸಂದರ್ಭದಲ್ಲಿ ವಿಶೇಷ ಸಿಹಿತಿಂಡಿಗಳನ್ನು ಹಂಚಿಕೊಂಡರು.

ಮನರಂಜನೆಯ ಸಂಜೆ ನಂತರ ವಿಜೇತರನ್ನು ಹಬ್ಬದ ಪ್ರಯುಕ್ತ ಬಾಳೆ ಎಲೆ ಊಟದ ಸಂಭ್ರಮಕ್ಕೆ ಆಹ್ವಾನಿಸಲಾಯಿತು. ಅಲ್ಲಿ ಅವರಿಗೆ ಅಖಿಲಾಂಡೇಶ್ವರಿ, ಪಾರು, ಆದಿತ್ಯ ಮತ್ತು ದಾಮಿನಿ ದೀಪಾವಳಿಯ ವಿಶೇಷ ಭಕ್ಷ್ಯಗಳನ್ನು ಬಡಿಸಿದರು. ರುಚಿಕರವಾದ ತುಪ್ಪದೊಂದಿಗೆ ಅಖಿಲಾಂಡೇಶ್ವರಿ ಬಡಿಸಿದ ಹೋಳಿಗೆಯನ್ನು ಅರಸನಕೋಟೆಯ ಅಂದಿನ ಅದೃಷ್ಟ ಅತಿಥಿಗಳು ಮೆಚ್ಚಿದರು.

Leave a Comment