ಪಾರದರ್ಶಕ ತನಿಖೆಗೆ ಸಾ.ರಾ. ಆಗ್ರಹ

ಮೈಸೂರು, ಮೇ ೨೫- ಮೈಮೂಲ್‌ನಲ್ಲಿ ನಡೆದಿರುವ ನೇಮಕಾತಿ ಬಗ್ಗೆ ಪಾರದರ್ಶಕ ತನಿಖೆ ನಡೆಸುವಂತೆ ಶಾಸಕ ಸಾ.ರಾ. ಮಹೇಶ್ ಆಗ್ರಹಿಸಿದ್ದಾರೆ.
ನಾನು ಹೇಳಿದಂತೆ ತನಿಖೆ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುವುದಿಲ್ಲ. ಆದರೆ ಅಕ್ರಮ ತನಿಖೆ ಬಗ್ಗೆ ಪಾರದರ್ಶಕತೆ ಇರಬೇಕೆಂಬುದು ನನ್ನ ಒತ್ತಾಸೆಯಾಗಿದೆ. ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೇಮಕಾತಿ ಸಮಿತಿಯಲ್ಲಿರುವ ನಿಬಂಧಕರಿಗೆ ತನಿಖೆಯ ಹೊಣೆ ಹೊರಿಸಿದರೆ, ಸತ್ಯ ಹೇಗೆ ಹೊರಗೆ ಬರಲು ಸಾಧ್ಯ? ಎಂದು ಪ್ರಶ್ನಿಸಿದ ಸಾ.ರಾ. ಮಹೇಶ್ ಅವರು, ನೇಮಕಾತಿಗೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ ಎಂದು ದೂರಿದರು.
ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು, ಮೈಮೂಲ್ ತಂಟೆಗೆ ಹೋಗಬೇಡ ಎಂದು ಬಹಿರಂಗವಾಗಿ ಹೇಳಲಿ, ನಾನು ನಮ್ಮ ಹಿರಿಯ ನಾಯಕರ ಮಾತನ್ನು ಮೀರೋದಿಲ್ಲ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಮುಂದಿನ ನಿರ್ಧಾರ ಮಾಡುವೆ ಎಂದು ಜಿ.ಟಿ. ದೇವೇಗೌಡ ಅವರಿಗೆ ಟಾಂಗ್ ನೀಡಿದರು.
ಜಿ.ಟಿ. ದೇವೇಗೌಡ ಅವರು, ನನ್ನನ್ನು ಕರೆದು ಏನುಬೇಕಾದರೂ ಮಾತಾಡಲಿ, ಅವರಿಗೆ ನನ್ನ ಬಗ್ಗೆ ಮಾತನಾಡುವ ಹಕ್ಕಿದೆ. ಆದರೆ ಬಹಿರಂಗವಾಗಿ ಮಾತನಾಡುವಾಗ ಪದ ಬಳಕೆ ಸರಿ ಇರಲಿ ಎಂದು ತಿರುಗೇಟು ನೀಡಿದರು.

Share

Leave a Comment