ಪಾದಾಚಾರಿ ಸಾವು

ದಾವಣಗೆರೆ.ಆ.13; ಪಾದಚಾರಿಯೊಬ್ಬರು ಆಕಸ್ಮಿಕವಾಗಿ ಮೃತಪಟ್ಟಿರುವ ಘಟನೆ ನಗರದ ಪಿಬಿ ರಸ್ತೆಯಲ್ಲಿನ ತ್ರಿಶೂಲ್ ಕಂಫರ್ಟ್ ಬಳಿ ಇಂದು ನಡೆದಿದೆ. ನಾಗರಾಜ್ (55) ಮೃತಪಟ್ಟ ದುರ್ದೈವಿ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆತ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ. ನಾಗರಾಜ್ ಶೇಖರಪ್ಪನಗರದ ನಿವಾಸಿಯಾಗಿದ್ದು, ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದರು. ಇಂದು ದಾವಣಗೆರೆಗೆ ಬಂದಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment