ಪಾದರಸ ಬಿಡುಗಡೆಯ ಸನಿಹ

ಹೃಷಿಕೇಶ್ ಜಂಬಗಿ ನಿರ್ದೇಶನ ಮಾಡಿರುವ “ಪಾದರಸ” ಚಿತ್ರೀಕರಣದ ನಂತರದ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದೆ.
ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. ಪಾದರಸ ಪ್ರತಿಯೊಬ್ಬ ಪೋಷಕರು ನೋಡಲೇಬೇಕಾದ ಚಿತ್ರ. ಇಬ್ಬರು ಅನಾಥ ಹುಡುಗರು ಯಾರ ಸಹಾಯವಿಲ್ಲದೆ ಹೇಗೆ ಬೆಳೆಯುತ್ತಾರೆ ಎನ್ನುವ ಸುತ್ತ ಚಿತ್ರ ಸಾಗಿದೆ ಚಿತ್ರವನ್ನು ಆರಂಭದಿಂದಲೇ ನೋಡಿದರೆ ಮಾತ್ರ ಅರ್ಥವಾಗೋದು ಎಂದು ಮಾತಿಗಿಳಿದರು ನಿರ್ದೇಶಕರು. ಚಿಕ್ಕ ಪಾತ್ರವಾದರೂ ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿದ್ದರೂ ಸಾಮಾಜಿಕ ಕಳಕಳಿ ಸಂದೇಶವಿರುವ ಪಾತ್ರ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲಾಗುವುದು ಎಂದು ಹೇಳಿಕೊಂಡರು.

ನಟಿ ವೈಷ್ಣವಿ ಮೆನನ್, ಮೊದಲು ಸಹಿ ಮಾಡಿದ ಚಿತ್ರ ಆ ಬಳಿಕ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಮೂಲಕ ನಟನೆ ಕಲಿತಿದ್ದೇನೆ ಎಂದರು.

ನಟ ಸಂಚಾರಿ ವಿಜಯ್, ಚಿತ್ರದಲ್ಲಿ ದ್ವಂದ್ವಾರ್ಥವಿದೆ. ಮೊದ ಮೊದಲು ನಟಿಸಲು ಭಯ ಆಗಿತ್ತು, ಡಬ್ಬಿಂಗ್ ಮಾಡುವಾಗ ಚಿತ್ರ ಬಿಟ್ಟಿದ್ದರೆ ಸಹಜವಾಗಿ ಬೇಜಾರಾಗುತ್ತಿತ್ತು . ಪಡ್ಡೆ ಹುಡುಗರಿಗಾಗಿ ಮಾಡಿದ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ. ಡಬ್ಬಂಗ್ ಮಾಡುವಾಗ ಚಿತ್ರ ಪಾತ್ರ ಮತ್ತು ಸಂಭಾಷಣೆಯ ಬಗ್ಗೆ ಅವಿವಾಯಿತು ಎಂದು ಹೇಳಿಕೊಂಡರು.

ಮತ್ತೊಬ್ಬ ಕಲಾವಿದ ನಿರಂಜನ್, ವಿಜಯ್ ಇರುವ ಕಾರಣಕ್ಕಾಗಿ ನಟಿಸಿದೆ ಎಂದರು.

ನಟಿ ಮನಸ್ವಿನಿ ಒಳ್ಳೆಯ ಪಾತ್ರ ಸಿಕ್ಕಿದೆ. ಪಾದರಸ ಒಳ್ಳೆಯ ಚಿತ್ರವಾಗಲಿದೆ ಎಂದು ವಿವರ ನೀಡಿದರೆ ಸಂಗೀತ ನಿರ್ದೇಶಕ ಎ.ಟಿ ರವೀಶ್ ಐದು ಹಾಡುಗಳಿವೆ ಎಲ್ಲವೆ ಎಂದು ಹೇಳಿದರು.

Leave a Comment