ಪಾದಗಳ ದುರ್ವಾಸನೆಯೇ,,,,,,?

 ಶುಂಠಿಯ ಸೇವನೆಯಿಂದ ಚರ್ಮದಲ್ಲಿ ಡರ್ಮಿಸೈಡಿನ್ ಎಂಬ ಪ್ರೋಟೀನು ಉತ್ಪತ್ತಿಯಾಗುತ್ತದೆ. ಈ ಪ್ರೋಟೀನು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಪ್ರಮುಖವಾಗಿ ದುರ್ವಾಸನೆಯನ್ನು ನಿವಾರಿಸುತ್ತದೆ.
ಪಾದಗಳ ದುರ್ವಾಸನೆಗೆ ಬೆವರು ಮತ್ತು ಬೆವರಿನಲ್ಲಿ ಕೊಳೆಯುವ ಬ್ಯಾಕ್ಟೀರಿಯಾಗಳು ಕಾರಣ. ಇದನ್ನು ನಿವಾರಿಸಲು ಸುಲಭ ವಿಧಾನವೆಂದರೆ ಹಸಿಶುಂಠಿ ಮತ್ತು ನೀರು. ಶುಂಠಿಯ ರಸದಲ್ಲಿ ಚರ್ಮದ ಆಳಕ್ಕೆ ಇಳಿಯುವ ತೀಕ್ಷ್ಣ ಗುಣವಿದೆ. ಅಲ್ಲದೇ ಇದರಲ್ಲಿ ತೇವಾಂಶವನ್ನು ಹೀರಿಕೊಂಡು ಒಣಗಿಸುವ ರಕ್ಷಾ ಗುಣವೂ ಇದೆ.
ಬೆವರು ಹರಿದ ಬಳಿಕ ಚರ್ಮದ ಹೊರಪದರದ ಸತ್ತ ಜೀವಕೋಶಗಳು ತೀರಾ ಸಡಿಲವಾಗುತ್ತವೆ. ಬ್ಯಾಕ್ಟೀರಿಯಾಗಳು ಈ ಜೀವಕೋಶಗಳನ್ನು ತಿಂದು ದುರ್ವಾಸನೆ ಮೂಡಿಸುತ್ತವೆ. ಶುಂಠಿಯ ಸೇವನೆಯಿಂದ ಚರ್ಮದಲ್ಲಿ ಡರ್ಮಿಸೈಡಿನ್ ಎಂಬ ಪ್ರೋಟೀನು ಉತ್ಪತ್ತಿಯಾಗುತ್ತದೆ. ಈ ಪ್ರೋಟೀನು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಪ್ರಮುಖವಾಗಿ ದುರ್ವಾಸನೆಯನ್ನು ನಿವಾರಿಸುತ್ತದೆ.
ಮೊದಲಿಗೆ ಶುಂಠಿಯ ರಸದಿಂದ ಪಾದಗಳನ್ನು ಮಸಾಜ್ ಮಾಡಿಕೊಳ್ಳಬೇಕು ಇದಕ್ಕಾಗಿ ಒಂದು ದೊಡ್ಡ ಗಾತ್ರದ ಶುಂಠಿಯನ್ನು ಸಿಪ್ಪೆ ನಿವಾರಿಸಿ ನಯವಾಗಿ ಅರೆದುಕೊಳ್ಳಬೇಕು. ಒಂದು ಕಪ್ ನೀರನ್ನು ಕುದಿಸಿ ಇದರಲ್ಲಿ ಅರೆದ ಶುಂಠಿಯನ್ನು ಸೇರಿಸಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಬೇಯಿಸಬೇಕು. ಬಳಿಕ ಈ ನೀರನ್ನು ತಣಿಸಿ ಹಿಂಡಿ ರಸವನ್ನು ಸಂಗ್ರಹಿಸಿ.
ಈ ನೀರನ್ನು ಬಾಟಲಿಯಲ್ಲಿ ಭದ್ರವಾಗಿ ಮುಚ್ಚಿಡಿ. ಪ್ರತಿರಾತ್ರಿ ಮಲಗುವ ಮುನ್ನ ಈ ರಸದಿಂದ ಈಗ ತಾನೇ ತೊಳೆದುಕೊಂಡು ಒರೆಸಿಕೊಂಡ ಪಾದಗಳನ್ನು ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ. ಶುಂಠಿಯ ರಸ ಬಟ್ಟೆಗಳ ಮೇಲೆ ಕಲೆ ಉಳಿಸುವುದಿಲ್ಲವಾದುದರಿಂದ ನಿಶ್ಚಿಂತೆಯಿಂದ ಮಲಗಿ.
ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಕಾಲುಗಳಿಗೆ ಹತ್ತಿಯ ಕಾಲುಚೀಲಗಳನ್ನು ಧರಿಸಿ ಮಲಗಿ. ಆದರೆ ಚಳಿಗಾಲದಲ್ಲಿ ಸೂಕ್ತವಾದ ತೇವಕಾರಕ ಕ್ರೀಂ ಹಚ್ಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಈ ರಸವನ್ನು ನಿಯಮಿತವಾಗಿ ಹಚ್ಚಿಕೊಳ್ಳುತ್ತಾ ಬರುವ ಮೂಲಕ ಪಾದಗಳ ವಾಸನೆ ಇಲ್ಲವಾಗುವ ಜೊತೆಗೇ ಪಾದಗಳು ಮೃದುವಾಗಿ ಬಿರುಕುಗಳಿಲ್ಲದ ಸೌಂದರ್ಯ ಪಡೆಯುತ್ತದೆ.

Leave a Comment