ಪಾಠಾ ಕೇಳ್ಬೇಕಾ ಗಬ್ಬು ವಾಸನೆ ಕುಡ್ಬೇಕಾ,,,

ಎನ್.ವೀರಭದ್ರಗೌಡ
ಬಳ್ಳಾರಿ, ಆ.1: ಪ್ರಶಾಂತತೆ, ಸ್ವಚ್ಚ, ಸುಂದರ, ಉತ್ತಮ ವಾತಾವರಣದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಭೋಧನೆ ಪರಿಣಾಮಕಾರಿಯಾಗಿರುತ್ತದೆ. ಆದರೆ ದಿನ ನಿತ್ಯ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡೇ ಉಸಿರಾಡುವಂತಹ ಪರಿಸ್ಥಿತಿಯಲ್ಲಿನ ತರಗತಿಗಳಲ್ಲಿ ಪಾಠಾ ಕೇಳ್ಬೇಕಾ,,,,ಗಬ್ಬು ವಾಸನೆ ಕುಡ್ಬೇಕಾ,,, ಎಂಬ ಪರಿಸ್ಥಿತಿ ನಗರದ ಕಾಲೇಜೊಂದರಲ್ಲಿ ಉದ್ಭವಿಸಿದೆ.

ನಗರದ ಪ್ರತಿಷ್ಟಿತ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿನ ವಿದ್ಯಾರ್ಥಿನಿಯರು ಇಂತಹ ಪರಿಸ್ಥಿತಿ ಎದುರಿಸುವಂತಾಗಿದೆ. ಕಾಲೇಜು ಕಟ್ಟಡ ಮತ್ತು ರೈಲ್ವೇ ಮಾರ್ಗದ ಮಧ್ಯೆ ಹರಿಯುತಿತ್ತಿರುವ ತೆರೆದ ಚರಂಡಿಯ ನೀರೇ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ.

ಈ ಮೊದಲು ಈ ಚರಂಡಿ ಇರಲಿಲ್ಲವೇ ಎಂದೇನಿಲ್ಲ, ಇತ್ತು ಇದ್ದರೂ ನೀರು ಹರಿದುಕೊಂಡು ಹೋಗುತ್ತಿದ್ದರಿಂದ ಇಷ್ಟೊಂದು ಗಬ್ಬು ವಾಸನೆ ಇರಲಿಲ್ಲ. ಈಗ ಚರಂಡಿ ತುಂಬ ಗಿಡ ಗಂಟೆಗಳು ಬೆಳೆದಿರುವುದು, ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಹೊಂಡಗಳಂತೆ ರಚನೆಯಾಗಿ ನಿಂತಿರುವುದೇ ಈ ಗಬ್ಬುವಾಸನೆ ಪರಿಸ್ಥಿತಿ ಉಂಟಾಗಿದೆ.

ಇದನ್ನು ಸ್ವಚ್ಚಗೊಳಿಸುವಂತೆ, ನಗರ ಪಾಲಿಕೆಯ ಅಧಿಕಾರಿಗಳು, ಮೇಯರ್, ವಾರ್ಡಿನ ಸದಸ್ಯರಿಗೇ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಹ ಮನವಿ ಮಾಡಿದ್ದಾರೆ. ಆದರೆ ಚರಂಡಿಯ ಈ ಸಮಸ್ಯೆ ಮಾತ್ರ ಬಗೆ ಹರಿದಿಲ್ಲ, ವಿದ್ಯಾರ್ಥಿನಿಯರು ಮೂಗು ಮುಚ್ಚಿಕೊಳ್ಳುವುದು ತಪ್ಪಿಲ್ಲ.

ವಿದ್ಯಾರ್ಥಿನಿಯರು ಗಾಳಿ ಬೀಸಿದಂತೆ ಈ ಗಬ್ಬು ವಾಸನೆ ಮೂಗಿಗಿ ಹೆಚ್ಚಾಗಿ ರಾಚುತ್ತದೆ. ಅದಕ್ಕಾಗಿ ಕೊಠಡಿಯ ಕಿಡಿಕಿಗಳನ್ನೆಲ್ಲ ಮುಚ್ಚುತ್ತೇವೆ. ಆದರೂ ವಾಸನೆ ಬಂದೇ ಬರುತ್ತೆ, ಗಾಳಿಯ ದಿಕ್ಕು ಬದಲಾದಾಗ ಮಾತ್ರ ಒಂದಿಷು ಕಡಿಮೆ ಇರುತ್ತದೆ. ಒಟ್ಟಿನಲ್ಲಿ ಈ ಗಬ್ಬುನಾಥ ನಮ್ಮ ಕಲಿಕೆಗೆ ಮಾರಕವಾಗಿದೆ. ಪಾಠ ಕೇಳಲು ಏಕಾಗ್ರತೆಯನ್ನು ಆಹಾಳು ಮಾಡುತ್ತಿದೆ ಎನ್ನುತ್ತಾರೆ.

ಕ್ಲೀನ್ ಮಾಡಿಸುವುದು ಏಕೆ ವಿಳಂಬ ಎಂದು ಕೇಳುವ ಪ್ರಶ್ನೆಗೆ ಪಾಲಿಕೆಯ ಅಧಿಕಾರಿಗಳು ಆ ಸ್ಥಳ ನಮಗೆ ಸೇರಿದ್ದಲ್ಲ, ರೈಲ್ವೇ ಇಲಾಕೆಗೆ ಸಂಭಂಧಿಸಿದ್ದು, ಅವರೇ ಸ್ವಚ್ಚ ಮಾಡಬೇಕು. ಇಲ್ಲ ಅವರ ಅನುಮತಿ ನಮಗೆ ಸಿಗಬೇಕು, ಈ ದಿಶೆಯಲಿ ಪ್ರಯತ್ನ ನಡೆಸಿದ್ದೇವೆ ಎನ್ನುತ್ತಾರೆಂದು ಕಾಲೇಜು ಆಡಳಿತ ಮಂಡಳಿಯ ಸದಸ್ಯ ಮುಂಡಾಸದ ಮಲ್ಲಿಕಾರ್ಜುನ ಹೇಳುತ್ತಾರೆ.

ದುರ್ಗಮ್ಮ ದೇವಸ್ಥಾನದ ಕಡೆಯಿಂದ ಬರುವ ಈ ಚರಂಡಿ ನೀರು ಈ ಮೊದಲು ಸರಾಗವಾಗಿ ಹರಿಯುತ್ತಿತ್ತು ಮಳೆ ಬಂದಾಗ ಕೊಚ್ಚಿಕೊಂಡು ಹೋಗುತ್ತಿದ್ದರಿಂದ ಇಷ್ಟೊಂದು ಮಲಿನತೆ, ಗಬ್ಬು ವಾಸನೆ ಇರುತ್ತಿರಲಿಲ್ಲ. ಸತ್ಯನಾರಾಯಣ ಪೇಟೆ ರೈಲ್ವೇ ಅಂಡರ್ ಬ್ರಿಡ್ಜ್ ಕಟ್ಟಿದ ಮೇಲೆ ಚರಂಡಿ ನೀರು ಆ ಕಡೆ ಹರಿದು ಹೋಗುವುದು ನಿಂತಿದ್ದರಿಂದ. ಈ ಮಲಿನತೆ ಹೆಚ್ಚಾಗಿದೆ. ಚರಂಡಿ ಈರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣದಿಂದ ಆ ರೈಲ್ವೇ ಸೇತುವೆ ಬಳಿ ಚರಂಡಿ ನೀರು ಸೀಪೇಜ್ ಆಗಿ ಬರುತ್ತಿದೆ ಎಂಬುದು ಕಾಲೇಜಿನ ಉಪನ್ಯಾಸಕರೊಬ್ಬರ ಹೇಳಿಕೆಯಾಗಿದೆ.

ಈ ಸಮಸೈ ಬರೀ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಲ್ಲ, ಮುಂಧೆ ಸಾಗಿದಂತೆ ಇರುವ ಅನೇಕ ಮನೆಗಳ ನಿವಾಸಿಗಳದ್ದೂ ಆಗಿದೆ. ಒಟ್ಟಾರೆ ಈ ಚರಂಡಿಯನ್ನು ಸ್ವಚ್ಚಗೊಳಿಸಿ, ಇಕ್ಕೆಲಗಳಲ್ಲಿ ಗೋಡೆ ಕಟ್ಟಿ ಅದರ ಮೇಲೆ ಕಾಂಕ್ರೀಟ್ ಹೊದಿಕೆ ಹಾಕಿ, ಮುಂಭಾಗದಲ್ಲಿ ನೀರು ಹರಿದು ಹೋಗುವಂತೆ ಪಾಲಿಕೆ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಮತ್ತು ಇಲ್ಲಿನ ನಿವಾಸಿಗಳ ಮನವಿಯಾಗಿದೆ.

ಇದನ್ನು ಮಾಡದೇ ಅಧಿಕಾರಿಗಳು ಬರೀ ಸ್ವಚ್ಚತಾ ಅಭಿಯಾನದ ಹೆಸರಲ್ಲಿ ಲಕ್ಷ, ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲದಂತಾಗುತ್ತದೆ ಎಂದರೆ ತಪ್ಪಾಗಲಾರದು.

Leave a Comment