ಪಾಕ್ ವಿಮಾನ ದಾಳಿ ವಿಫಲ: ಐಎಎಫ್

ನವದೆಹಲಿ, ಏ. ೧೬: ಪಾಕಿಸ್ತಾನದಲ್ಲಿನ ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ದಳ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು, ಪಾಕಿಸ್ತಾನ ವಾಯು ಪಡೆ ಫೆ. ೨೭ ರಂದು ಜಮ್ಮು ನೌಶೆರಾ ವಲಯದಿಂದ ನಡೆಸಿತೆನ್ನಲಾದ ಪ್ರತಿ ವೈಮಾನಿಕ ದಾಳಿಯು ತನ್ನ ಉದ್ದೇಶ ಸಾಧಿಸುವಲ್ಲಿ ಪೂರ್ಣ ವಿಫಲವಾಗಿದೆ ಎಂದು ಭಾರತೀಯ ವಾಯು ಪಡೆ ದಂಡನಾಯಕ (ಏರ್ ಛೀಪ್ ಮಾರ್ಷಲ್) ಬಿ.ಎಸ್. ಧನೋವಾ ಹೆಮ್ಮೆಪಟ್ಟಿದ್ದಾರೆ.

ಸೋಮವಾರ ದೆಹಲಿಯಲ್ಲಿ ನಡೆದ ಭಾರತೀಯ ವಾಯು ಪಡೆ ಮಾರ್ಷಲ್ ಅರ್ಜುನ್ ಸಿಂಗ್‌ರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಏರ್ಪಡಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಧನೋವಾ, ಫೆ. ೨೭ ರಂದು ಪಾಕಿಸ್ತಾನ ಭಾರತದ ಮೇಲೆ ನಡೆಸಿದ ಪ್ರತಿದಾಳಿ ತನ್ನ ಉದ್ದೇಶ ಸಾಧನೆಯಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಫೆ. ೨೬ ರಂದು ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಅನಿರ್ದಿಷ್ಟ ಸಂಖ್ಯೆಯ ಭಯೋತ್ಪಾದಕರನ್ನು ಕೊಂದಿತು. “ತಂತ್ರಜ್ಞಾನ ನಮ್ಮ ಕಡೆಗಿದ್ದು, ಅದನ್ನು ನಾವು ಹೊಂದಿದ್ದೇವೆ. ಕರಾರುವಾಕ್ಕಾಗಿ ಗುರಿ ಮುಟ್ಟುವಂತಹ ಶಸ್ತ್ರಾಸ್ತ್ರಗಳನ್ನು ನಾವು ಪ್ರಯೋಗಿಸಬೆಲ್ಲೆವು ಎಂದು ಅವರು ಹೆಮ್ಮೆಪಟ್ಟರು.

Leave a Comment