ಪಾಕ್ ನಾಯಕ ಸರ್ಫರಾಜ್ ಅಹ್ಮದ್ ತಲೆದಂಡ

ನವದೆಹಲಿ, ಅ.18 – ಪಾಕಿಸ್ತಾನ ಕ್ರಿಕೆಟ್ ತಂಡದ ಸರ್ಫರಾಜ್ ಅಹ್ಮದ್ ಅವರನ್ನು ನಾಯಕತ್ವದಿಂದ ಕೆಳಗಿಸಳಿಸಲಾಗಿದ್ದು, ಟೆಸ್ಟ್ ನಲ್ಲಿ ಅಜರ್ ಅಲಿ ಹಾಗೂ ಟಿ-20ಯಲ್ಲಿ ಬಾಬರ್ ಅಜಮ್ ತಂಡವನ್ನು ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿರುವ ಪಾಕಿಸ್ತಾನ ಮೂರು ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮುಂದಿನ ವರ್ಷ ಟಿ-20 ವಿಶ್ವಕಪ್ ನಡೆಯಲಿದ್ದು, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಹೊಸಬರಿಗೆ ಮಣೆ ಹಾಕಿದೆ.

ಸರ್ಫರಾಜ್ ಅವರ ನಾಯಕತ್ವದಲ್ಲಿ ಪಾಕ್ ಚಾಂಪಿಯನ್ಸ್ ಟ್ರೋಪಿಯನ್ನು 2017ರಲ್ಲಿ ಗೆದ್ದು ಕೊಂಡಿತ್ತು. ಅಲ್ಲದೆ ಟಿ-20 ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದಿತ್ತು. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಟಿ-20 ಸರಣಿ ಸೋತ ಬಳಿಕ ಪಿಸಿಬಿ ಈ ಮಹತ್ವದ ಆದೇಶವನ್ನು ಕೈ ಗೊಂಡಿದೆ.

ಅಜರ್ ಅಲಿ ಪಾಕ್ ತಂಡದ ಸ್ಟಾರ್ ಟೆಸ್ಟ್ ಬ್ಯಾಟ್ಸ್ ಮನ್. ಇವರು 2017ರಲ್ಲಿ ಸೀಮಿತ ಓವರ್ ಗಳ ಕ್ರಿಕೆಟ್ ನಿಂದ ಹಿಂದೆ ಸರಿದರು. ಅಜರ್ ಟೆಸ್ಟ್ ನಲ್ಲಿ 15 ಶತಕ ಸೇರಿದಂತೆ 5600 ರನ್ ಸಿಡಿಸಿದ್ದಾರೆ.

“ಪಾಕಿಸ್ತಾನ ತಂಡವನ್ನು ಮುನ್ನಡೆಸುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ನನಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ” ಎಂದು ಅಜರ್ ಅಲಿ ತಿಳಿಸಿದ್ದಾರೆ.

ವಿಶ್ವದ ನಂಬರ್ 1 ಟಿ-20 ಬ್ಯಾಟ್ಸ್ ಮನ್ ಬಾಬರ್ ಅಜಮ್, “ನಾನು ಈ ಸವಾಲನ್ನು ಎದುರಿಸಲು ಸಿದ್ಧನಾಗಿದ್ದೇನೆ. ಪಿಸಿಬಿ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ” ಎಂದಿದ್ದಾರೆ.

Leave a Comment