ಪಾಕ್ ಜೊತೆ ಮಾತುಕತೆಗೆ ಭಾರತ ಸಿದ್ಧ

ನವದೆಹಲಿ, ಜೂ 20: ಭಾರತವು ಪಾಕಿಸ್ತಾನದ ಜೊತೆ ಮಾತುಕತೆಗೆ ಸಿದ್ಧವಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.

ಪಾಕಿಸ್ತಾನದಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಕಳಿಸಲಾದ ಅಭಿನಂದನೆಯ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ ಭಾರತ, ‘ಪಾಕಿಸ್ತಾನದೊಂದಿದೆ ಮಾತುಕತೆ ನಾವು ಸಿದ್ಧ ಎಂದಿದೆ’ ಎಂದಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಭಾರದತ, ನಾವು ಯಾವುದೇ ರೀತಿಯಲ್ಲೂ ಮಾತುಕತೆಗೆ ಸಿದ್ಧ ಎಂದಿಲ್ಲ. ಅಭಿನಂದನೆಯ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ, “ಪಾಕಿಸ್ತಾನ ಸೇರಿದಂತೆ ಭಾರತದ ನೆರೆಯ ಎಲ್ಲ ದೇಶಗಳೊಂದಿಗೂ ನಾವು ಸಹಕಾರ ಮತ್ತು ಸಹಜ ಸಂಬಂಧವನ್ನು ಬಯಸುತ್ತೇವೆ ಎಂದಿದ್ದೇವೆ. ಎಲ್ಲಿಯೂ ಮಾತುಕತೆಗೆ ಸಿದ್ಧ ಎಂದಿಲ್ಲ” ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಗೆದ್ದು. ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೊದಿ ಅವರಿಗೆ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವವರಿಗೆ ಪಾಕಿಸ್ತಾನ ಅಬಿನಂದನೆಯ ಸಂದೇಶ ಕಳಿಸಿತ್ತು.

Leave a Comment