ಪಾಕ್ ಎಸ್‌ಸಿಗೆ ತೃತೀಯ ಲಿಂಗಿಗಳ ನೇಮಕ

ಇಸ್ಲಮಾಬಾದ್,ಸೆ.೧೨- ತೃತೀಯ ಲಿಂಗಿಗಳಿಗೂ ಸಮಾಜದಲ್ಲಿರುವ ಹಕ್ಕನ್ನು ಎತ್ತಿಹಿಡಿಯುವ ಸಲುವಾಗಿ ಮುಸ್ಲಿಂ ಬಹುಸಂಖ್ಯಾತ ದೇಶ ಪಾಕಿಸ್ತಾನದ ಸುಪ್ರೀಂಕೋರ್ಟ್‌ನಲ್ಲಿ ಎರಡು ಹುದ್ದೆಗಳನ್ನು ನೀಡಲಾಗುವುದು ಎಂದು ಮುಖ್ಯ ನ್ಯಾಯಾಧೀಶ ಸಕೀಬ್ ನಿಸಾರ್ ಆದೇಶಿಸಿದ್ದಾರೆ.

ತೃತೀಯ ಲಿಂಗಿಗಳ ಹಕ್ಕಿನ ಕುರಿತ ಅರ್ಜಿಯ ವಿಚಾರಣೆಗಾಗಿ ರಚಿಸಿದ್ದ ನ್ಯಾಯಪೀಠದ ಮುಖ್ಯ ನ್ಯಾಯಾಧೀಶರಾಗಿದ್ದ ಸಕೀಬ್ ನಿಸಾರ್ ಅವರು ಈ ಮಹತ್ವದ ಆದೇಶ ನೀಡಿದ್ದಾರೆ.

ನಮ್ಮ ಸಮಾಜದಲ್ಲಿ ತೃತೀಯ ಲಿಂಗಿಗಳೆಂದರೆ ಅಪಹಾಸ್ಯದ ವಸ್ತುಗಳೆಂದು ಪರಿಗಣಿಸುತ್ತಾರೆ. ಅವರಿಗಿರುವ ಹಕ್ಕಿಗೆ ಪ್ರಥಮ ಪ್ರಾಶಸ್ತ್ರ್ಯ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ನಿಸಾರ್ ಅವರು, ತೃತೀಯ ಲಿಂಗಿಗಳಿಗೆ ಸಂಬಂಧಿಸಿದ ಕಡತ ಹಾಗೂ ಪ್ರಕರಣಗಳನ್ನು ಶೀಘ್ರ ವಿಚಾರಣೆ ನಡೆಸುವಂತೆ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡುವುದಾಗಿ ಹೇಳಿದರು.

Leave a Comment