ಪಾಕಿಸ್ತಾನದ ಕರಾಚಿಯಲ್ಲಿ 107 ಪ್ರಯಾಣಿಕರಿದ್ದ ವಿಮಾನ ಪತನ

ಇಸ್ಲಾಮಾಬಾದ್, ಮೇ 22 – ಪ್ರಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ (ಪಿಐಎ)ಗೆ ಸೇರಿದ ಪ್ರಯಾಣಿಕ ವಿಮಾನವೊಂದು ಇಂದು ಮಧ್ಯಾಹ್ನ ದಕ್ಷಿಣ ಬಂದರು ನಗರ ಕರಾಚಿಯಲ್ಲಿ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಪಿಐಎ ವಕ್ತಾರ ಅಬ್ದುಲ್ ಸತ್ತಾರ್ ಅಪಘಾತವನ್ನು ದೃಢಪಡಿಸಿದ್ದಾರೆ. ಲಾಹೋರ್‌ನಿಂದ ಕರಾಚಿಗೆ ಹಾರಾಟ ನಡೆಸುತ್ತಿದ್ದ ಎ -320 ವಿಮಾನವು 90ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ಅವರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪೊಲೀಸರು, ಭದ್ರತಾ ಪಡೆ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುತ್ತಿವೆ. ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಲಾಹೋರ್‌ನಿಂದ ಕರಾಚಿಗೆ ಹೋಗುವ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ತೊಂಬತ್ತೊಂಬತ್ತು ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು ಎಂದು ರೆಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Leave a Comment